ಮೂಲ್ಕಿ: ಇಲ್ಲಿಯ ಗೇರುಕಟ್ಟೆ ಬಳಿಯ ನಿಶಾ ಬಾಗ್ ಸಮೀಪ ಮಾರುತಿ ಆಮ್ನಿ ಕಾರೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಹಸವಾರ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ.
ಸ್ಕೂಟರ್‌ನಲ್ಲಿದ್ದ ಹಿಂಬದಿ ಸವಾರ ಕಾರ್ನಾಡು ಅಮೃತಾಮಯಿ ನಗರದ ನಿವಾಸಿ ಹೆಜಮಾಡಿ ಪೆಟ್ರೋಲ್ ಬಂಕ್ ಉದ್ಯೋಗಿ ಪ್ರಜ್ವಲ್ (19) ಮೃತ ಯುವಕ. ಮಂಗಳೂರು ಉತ್ತರ ಪೊಲೀಸ್ ಸಂಚಾರ ಎಸಿಪಿ ಗೀತಾ ಕುಲಕರ್ಣಿ ಹಾಗೂ ಇನ್‌ಸ್ಪೆಕ್ಟರ್ ಮಹಮ್ಮದ್ ಶರೀಫ್ ಮತ್ತು ಇತರ ಪೊಲೀಸರು ಘಟನ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಪ್ರಜ್ವಲ್ ತನ್ನ ಅಣ್ಣನ ಜತೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಕಾರು ಢಿಕ್ಕಿ ಹೊಡೆದಿದೆ. ಹಿಂಬದಿಯಲ್ಲಿದ್ದ ಪ್ರಜ್ವಲ್ ಬೈಕಿನಿಂದ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡವರು ಮೃತಪಟ್ಟರು.