Advertisement

ಸಂಕೇಶ್ವರ: ಮೂರು ಕಾರು-ದ್ವಿಚಕ್ರ ವಾಹನ ನಡುವೆ ಸರಣಿ ಅಪಘಾತ, ತಾಯಿ ಮಗು ಸಾವು, ಹಲವರಿಗೆ ಗಾಯ

08:06 AM Oct 10, 2022 | Team Udayavani |

ಸಂಕೇಶ್ವರ : ಮೂರು ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನ ನಡುವೆ ನಡೆದ ಸರಣಿ ಅಪಘಾತದಲ್ಲಿ ತಾಯಿ ಹಾಗೂ ಮಗು ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಹುಕ್ಕೇರಿ ತಾಲೂಕಿನ ರಕ್ಷಿ ಕ್ರಾಸ್ ಹತ್ತಿರ ರವಿವಾರ ರಾತ್ರಿ 8 ಗಂಟೆಯ ಸುಮಾರಿಗೆ ನಡಿದಿದೆ.‌

Advertisement

ಈ ಘಟನೆಯಲ್ಲಿ ಮೃತಪಟ್ಟವರನ್ನು ಬೈಲಹೊಂಗಲ ತಾಲೂಕಿನ ಬಾರತಿ (28) ಹಾಗೂ ವೇದಾಂತ ಪೂಜೇರಿ (6) ಇವರಿಬ್ಬರು ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ. ಇವರು ದ್ವಿಚಕ್ರ ವಾಹನ ಮೇಲೆ ಸಂಚರಿಸುತ್ತಿದ್ದರು ಎನ್ನಲಾಗಿದೆ.

ಇದರಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲದೆ ಮೂರು ಕಾರುಗಳ ವಾಹನ ಚಾಲಕರಿಗೆ ತೀವ್ರ ಗಾಯವಾಗಿದ್ದು, ಅವರನ್ನು ಕೂಡಾ ಆಸ್ಪತ್ರೆ ದಾಖಲಿಸಲಾಗಿದೆ.

ಎರಡು ಕಾರು ಘಟಪ್ರಭಾದಿಂದ ಹುಕ್ಕೇರಿ ಕಡೆ ಬರುತ್ತಿದ್ದವು ಒಂದು ಕಾರು ಗೋಕಾಕದಿಂದ ಹುಕ್ಕೇರಿ ಕಡೆ ಬರುತ್ತಿರುವಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಹುಕ್ಕೇರಿ ಸಿಪಿಐ ರಫೀಕ್ ತಹಶಿಲ್ದಾರ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಕನ್ನಡದ ಹಿರಿಯ ನಟ ಲೋಹಿತಾಶ್ವಗೆ ಹೃದಯಾಘಾತ : ಆಸ್ಪತ್ರೆಗೆ ದಾಖಲು

Advertisement
Advertisement

Udayavani is now on Telegram. Click here to join our channel and stay updated with the latest news.

Next