Advertisement

Road mishap: ಮಾಳ ಕಡಾರಿ ಬಳಿ ಮಿನಿ ಟೆಂಪೋ ಪಲ್ಟಿಕಾರ್ಮಿಕ ಸಾವು, ಇತರರಿಗೆ ಗಾಯ

09:05 PM Mar 21, 2024 | Team Udayavani |

ಕಾರ್ಕಳ: ತೆಂಗಿನಕಾಯಿ ಸಾಗಿಸುತ್ತಿದ್ದ ಮಿನಿ ಟೆಂಪೋ ಪಲ್ಟಿಯಾಗಿ ಕಾರ್ಮಿಕ ಮಾಳದ ಸುನಿಲ್‌ (32) ಎಂಬವರು ಮೃತಪಟ್ಟು, ಇತರ ನಾಲ್ವರು ಗಾಯಗೊಂಡ ಘಟನೆ ಮಾಳದ ಕಡಾರಿ ಕ್ರಾಸ್‌ ಬಳಿ ಮಾ. 21ರಂದು ನಡೆದಿದೆ.

Advertisement

ಕಾರ್ಕಳ- ಬಜಗೋಳಿ -ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಹೆಜಮಾಡಿಯಿಂದ ತೆಂಗಿನಕಾಯಿ ಲೋಡ್‌ ಮಾಡಿ ಮಾಳದತ್ತ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿದ್ದು, ಲಾರಿಯಲ್ಲಿ ಚಾಲಕ ಸೇರಿ 6 ಮಂದಿ ಕಾರ್ಮಿಕರಿದ್ದರು. ಸ್ಥಳೀಯರು ಗಾಯಾಳುಗಳನ್ನು ಕಾರ್ಕಳದ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದ್ದು. ಗಂಭೀರವಾಗಿ ಗಾಯಗೊಂಡಿದ್ದ ಸುನಿಲ್‌ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಉಳಿದ ಐದು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next