Advertisement

Road Mishap ಕುಂದಾಪುರ: ಟೆಂಪೋ ಢಿಕ್ಕಿ: ಮಹಿಳೆ ಸಾವು

09:40 PM Dec 10, 2023 | Team Udayavani |

ಕುಂದಾಪುರ: ಇಲ್ಲಿನ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಬಳಿ ಶನಿವಾರ ರಾತ್ರಿ ಟೆಂಪೋ ಢಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

Advertisement

ಸರಕಾರಿ ಬಸ್‌ ನಿಲ್ದಾಣದ ಸಮೀಪ ಹೆದ್ದಾರಿ ಡಿವೈಡರ್‌ನಲ್ಲಿ ಚಿತ್ರದುರ್ಗದ ಮಲ್ಲಮ್ಮ (45) ಅವರು ರಸ್ತೆ ದಾಟಲು ನಿಂತುಕೊಂಡಿದ್ದಾಗ ಬೈಂದೂರು ಕಡೆಯಿಂದ ಉಡುಪಿ ಕಡೆಗೆ ಪ್ರಸನ್ನ ಅವರು ಚಲಾಯಿಸುತ್ತಿದ್ದ ಟೆಂಪೋ ಢಿಕ್ಕಿಯಾಗಿದೆ.

ಗಂಭೀರ ಗಾಯಗೊಂಡ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿದ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪರೀಕ್ಷೀಸಿದ ವೈದ್ಯರು ಗಾಯಾಳು ಮಲ್ಲಮ್ಮ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.

ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next