Advertisement

Road mishap: ಪಿಕ್‌ಅಪ್‌ ಜೀಪ್‌ – ದ್ವಿಚಕ್ರ ವಾಹನ ಅಪಘಾತ; ಯುವಕ ಸಾವು

09:06 PM Mar 30, 2024 | Team Udayavani |

ಮಡಿಕೇರಿ: ನಾಪೋಕ್ಲು ಮುಖ್ಯ ರಸ್ತೆಯಲ್ಲಿ ಪಿಕ್‌ಅಪ್‌ ಜೀಪ್‌ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಯ್ಯಂಗೇರಿ ಗ್ರಾಮದ ನಿವಾಸಿ ಹಕೀಂ (23) ಯುವಕ ಚಿಕಿತ್ಸೆ ಫ‌ಲಿಸದೆ ಶನಿವಾರ ಮೃತಪಟ್ಟಿದ್ದಾರೆ.

Advertisement

ಮಾ. 20ರಂದು ನಾಪೋಕ್ಲು ಮುಖಾಮುಖೀ ಢಿಕ್ಕಿ ಸಂಭವಿಸಿತ್ತು. ಯುವಕ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ನಾಪೋಕ್ಲು ಠಾಣೆಯ ಮುಂಭಾಗದಲ್ಲಿ ಜಮಾಯಿಸಿದ ಗ್ರಾಮಸ್ಥರು ಪಿಕ್‌ಅಪ್‌ ವಾಹನದ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next