Advertisement

ಮೂಲ್ಕಿ: ಕಾರು- ದ್ವಿಚಕ್ರ ವಾಹನ ಢಿಕ್ಕಿ: ಸವಾರ ಸಾವು

08:14 PM May 09, 2022 | Team Udayavani |

ಮೂಲ್ಕಿ: ಇಲ್ಲಿಯ ಕಾರ್ನಾಡು ಹೆದ್ದಾರಿ-ಚಿತ್ರಾಪು ಕೂಡು ರಸ್ತೆಯಲ್ಲಿ ದ್ವಿಚಕ್ರ ವಾಹನವೊಂದಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಅಸುನೀಗಿದ ಘಟನೆ ಸೋಮವಾರ ಸಂಭವಿಸಿದೆ.

Advertisement

ಮುಚ್ಚಾರು ಬಳಿಯ ಮೋಹನ ಗೌಡ (50) ಮೃತ ವ್ಯಕ್ತಿ. ದ್ವಿಚಕ್ರ ವಾಹನ ಸವಾರರ ಹಿಂದೆ ಅವರ ಹತ್ತಿರದ ಸಂಬಂಧಿ 12 ವರ್ಷದ ಬಾಲಕನಿದ್ದು, ಅಫಘಾತದ ತೀವ್ರತೆಯಿಂದ ಆತ ಒಂದಷ್ಟು ದೂರಕ್ಕೆ ಎಸೆಯಲ್ಪಟ್ಟು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.

ಇದನ್ನೂ ಓದಿ:ಶನಿವಾರಸಂತೆ: ಹೊಳೆಗೆ ಈಜಲು ಹೋದ ಬಾಲಕ ನೀರು ಪಾಲು

Advertisement

Udayavani is now on Telegram. Click here to join our channel and stay updated with the latest news.

Next