Advertisement

Road Mishap: ಕಾರಿನ ಮೇಲೆ ಹರಿದ ಟ್ರಕ್;‌ ಪೊಲೀಸ್ ಇನ್ಸ್‌ಪೆಕ್ಟರ್ ಮೃತ್ಯು

01:13 PM Jul 30, 2023 | Team Udayavani |

ದೆಹಲಿ: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದ ಪರಿಣಾಮ ದೆಹಲಿ ಪೊಲೀಸ್ ಇನ್ಸ್‌ಪೆಕ್ಟರ್ ಮೃತಪಟ್ಟಿರುವ ಘಟನೆ ರೋಹ್ಟಕ್ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ (ಜು.30 ರಂದು) ನಡೆದಿದೆ.

Advertisement

ಅಪಘಾತದಲ್ಲಿ ಜಗ್ಬೀರ್ ಸಿಂಗ್ ಎಂದು ಗುರುತಿಸಲಾಗಿದೆ. ಇವರನ್ನು ಭದ್ರತಾ ಘಟಕದಲ್ಲಿ ನಿಯೋಜಿಸಲಾಗಿತ್ತು.

ರೋಹ್ಟಕ್ ರಸ್ತೆಯ ಮದಿಪುರ ಮೆಟ್ರೋ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು,ಕಾರು ಕೆಟ್ಟುನಿಂತ ಕಾರಣ ಜಗ್ಬೀರ್ ಸಿಂಗ್ ಅವರು ಅದರ ಹೊರಗೆ ಬಂದು ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಟ್ರಕ್‌ ವೊಂದು ಅವರ ಕಾರಿನ ಮೇಲೆ ಹರಿದಿದೆ. ಪರಿಣಾಮ ಇನ್ಸ್‌ಪೆಕ್ಟರ್ ಜಗ್ಬೀರ್ ಸಿಂಗ್ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಘಟನೆ ನಡೆದ ಕೂಡಲೇ ಟ್ರಕ್‌ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಪರಾರಿಯಾಗಿರುವ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next