Advertisement

Road Mishap ಕಾರಿಗೆ ಬೊಲೆರೋ ಢಿಕ್ಕಿ: ಗಾಯ

07:12 PM Oct 24, 2023 | Team Udayavani |

ಕಾರ್ಕಳ: ಸಾಣೂರು ಗುರುಬೆಟ್ಟು ಎಂಬಲ್ಲಿ ಆಮ್ನಿ ಕಾರಿಗೆ ಬೊಲೆರೋ ಢಿಕ್ಕಿ ಹೊಡೆದು ಕಾರಿನಲ್ಲಿದ್ದ ಯುವತಿಯೋರ್ವರು ಗಾಯಗೊಂಡ ಘಟನೆ ಅ. 22ರಂದು ಸಂಭವಿಸಿದೆ.

Advertisement

ಶಿವಮೊಗ್ಗ ಕಡೆ ಹೋಗುತ್ತಿದ್ದ ಆಮ್ನಿ ಕಾರು ಗುರುಬೆಟ್ಟು ಬಳಿ ತಲಪಿದಾಗ ಎದುರುನಿಂಧ ಬರುತ್ತಿದ್ದ ಬೊಲೆರೋ ಕಾರು ಓವರ್‌ಟೇಕ್‌ ಮಾಡುವ ಸಂದರ್ಭ ತೀರಾ ಬಲಬದಿಗೆ ಬಂದು ಅಮ್ನಿ ಕಾರಿಗೆ ಢಿಕ್ಕಿ ಹೊಡೆದಿದೆ.

ಪರಿಣಾಮ ಕಾರಿನಲ್ಲಿದ್ದ ಚೈತ್ರಾ (24) ಗಾಯಗೊಂಡರು. ಅಪಘಾತದಲ್ಲಿ ಆಮ್ನಿ ಕಾರಿನ ಎದುರು ಭಾಗ ಜಖಂಗೊಂಡಿದೆ. ಗಾಯಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next