Advertisement

ಊರಿನಲ್ಲಿದ್ದ ಪತ್ನಿಯನ್ನು ಕರೆತರಲು ಹೋಗುತ್ತಿದ್ದ ವೇಳೆ ಕಾರು ಅಪಘಾತ ಪತಿ ಸಾವು

12:30 PM Dec 12, 2020 | sudhir |

ವಿಜಯಪುರ: ಕಾರು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಮುದ್ದೇಬಿಹಾಳ ಬಳಿ ಸಂಭವಿಸಿದೆ.ಮುದ್ದೇಬಿಹಾಳ ತಾಲೂಕು ಹೊಕ್ರಾಣಿ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಮುದ್ದೇಬಿಹಾಳ – ತಾಳಿಕೋಟೆ ರಾಜ್ಯ ಹೆದ್ದಾರಿ ಪಕ್ಕದ ಗುಂಡಿಗೆ ಬಿದ್ದಿದೆ. ಪರಿಣಾಮ ಚಾಲಕ ಮುದ್ದೇಬಿಹಾಳದ ಚಿನ್ನದ ಅಂಗಡಿ ಕೆಲಸಗಾರ ಹಡಲಗೇರಿ ಗ್ರಾಮದ ನಿಂಗಯ್ಯ ಹಿರೇಮಠ (35) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Advertisement

ತಾಳಿಕೋಟೆ ತಾಲೂಕು ಮಾಳನೂರು ಗ್ರಾಮದಲ್ಲಿದ್ದ ತನ್ನ ಪತ್ನಿಯನ್ನು ಕರೆಯಲು ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಇದನ್ನೂ ಓದಿ:ಡಿ.12: ನಟ ರಜನಿಕಾಂತ್ ಗೆ 70ನೇ ಹುಟ್ಟುಹಬ್ಬದ ಸಂಭ್ರಮ: ಶುಭಕೋರಿದ ಪ್ರಧಾನಿ ಮೋದಿ

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿರುವ ತಾಳಿಕೋಟೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next