Advertisement

Road Mishap: ಸುಂಟಿಕೊಪ್ಪದಲ್ಲಿ ಬೈಕ್ ಅಪಘಾತ… ಪಿರಿಯಾಪಟ್ಟಣದ ಇಬ್ಬರು ಯುವಕರು ಮೃತ್ಯು

12:40 PM Aug 09, 2024 | Team Udayavani |

ಮಡಿಕೇರಿ: ನಿಯಂತ್ರಣ ತಪ್ಪಿದ ಬೈಕೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಮೃತಪಟ್ಟಿರುವ ಘಟನೆ ಸುಂಟಿಕೊಪ್ಪ ಸಮೀಪ ರಾಷ್ಟ್ರೀಯ ಹೆದ್ದಾರಿಯ ಶಾಂತಿಗೇರಿ ಎಂಬಲ್ಲಿ ಗುರುವಾರ (ಆಗಸ್ಟ್ 8) ರ ರಾತ್ರಿ ನಡೆದಿದೆ.

Advertisement

ಪಿರಿಯಾಪಟ್ಟಣ ತಾಲ್ಲೂಕು ನವಿಲೂರು ಗ್ರಾಮದ ಆಕಾಶ್ ಹಾಗೂ ಪ್ರಸನ್ನ ಮೃತ ದುರ್ದೈವಿಗಳಾಗಿದ್ದಾರೆ.

ಕಟ್ಟಡ ನಿರ್ಮಾಣದ ಸೆಂಟ್ರಿಂಗ್ ಕೆಲಸಕ್ಕೆಂದು ಪಿರಿಯಾಪಟ್ಟಣದಿಂದ ಮಡಿಕೇರಿಗೆ ಗುರುವಾರ ರಾತ್ರಿ ಆಗಮಿಸುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ.
ಗಂಭೀರವಾಗಿ ಗಾಯಗೊಂಡ ಆಕಾಶ್ ಸ್ಥಳದಲ್ಲೇ ಮೃತಪಟ್ಟರೆ, ಪ್ರಸನ್ನ ಚಿಕಿತ್ಸೆ ಫಲಕಾರಿಯಾಗದೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Delhi Excise Policy Case: ಕೊನೆಗೂ ಮನೀಶ್ ಸಿಸೋಡಿಯಾಗೆ ಸಿಕ್ತು ಷರತ್ತು ಬದ್ದ ಜಾಮೀನು…

Advertisement
Advertisement

Udayavani is now on Telegram. Click here to join our channel and stay updated with the latest news.

Next