Advertisement

Holehonnur: ಭೀಕರ ರಸ್ತೆ ಅಪಘಾತ, ಇಬ್ಬರು ಮೃತ್ಯು, 7 ಮಂದಿಗೆ ಗಾಯ

04:15 PM Sep 07, 2023 | Team Udayavani |

ಹೊಳೆಹೊನ್ನೂರು: ಸಮೀಪದ ಜಾವಳ್ಳಿ ಬಳಿ ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ವರು ಮೃತಪಟ್ಟು ಎರಡೂ ಕಾರಿನಲ್ಲಿದ್ದ ಒಟ್ಟು 7 ಮಂದಿ ಗಾಯಗೊಂಡ ಘಟನೆ ಸಂಭವಿಸಿದೆ.
ಜನರಿಗೆ ಗಾಯಗಳಾಗಿವೆ ಗಾಯಗೊಂಡವರನ್ನ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ.

Advertisement

ಮೃತರನ್ನು ಶಿವಮೊಗ್ಗದ ಇಲಿಯಾಜ್ ನಗರದ ವಾಸಿ ಅಪ್ತಾಬ್ (35)ಮತ್ತು ಅವರ ಸೊಸೆ ಮದಿಹಾ (13) ಎಂದು ಗುರುತಿಸಲಾಗಿದೆ.

ಘಟನೆಯಿಂದ ಎರಡೂ ಕಾರಿನಲ್ಲಿದ್ದವರು ಗಾಯಗೊಂಡಿದ್ದು ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗದಿಂದ ಚನ್ನಗಿರಿ ಕಡೆ ಕಾರಿನಲ್ಲಿ ಹೊರಟಿದ್ದ ಇಲಿಯಾಜ್ ನಗರದ ನಿವಾಸಿಗಳಿಗೆ ಚಿತ್ರದುರ್ಗದಿಂದ ಶಿವಮೊಗ್ಗದ ಕಡೆ ಬರುತ್ತಿದ್ದ‌ ಕಾರು ಡಿಕ್ಕಿ ಹೊಡೆದಿದೆ.

ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಾಯಗೊಂಡವರನ್ನು ಶಾಹೀದಾ ಬಾನು, ಮುಬೀನಾ, ಸದಫ್, ಮತ್ತು ೬ ವರ್ಷದ ಮಗು ಇವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಟ್ಜ್ ಕಾರಿನಲ್ಲಿದ್ದವರನ್ನ ಬೆಂಗಳೂರಿನ ವಿಜಯಪುರ ಬಡಾವಣೆಯ ಸುಬ್ರಹ್ಮಣಿ, ನಾಗರಾಜ್ ಮತ್ತು ಅನಿರುದ್ಧ ಎಂದು ಗುರುತಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next