Advertisement

Road Mishap; ಬೈಕ್ ಅಪಘಾತ: ಯುವಕ ಸಾವು

09:35 PM Oct 03, 2023 | Team Udayavani |

ಯಳಂದೂರು : ತಾಲೂಕಿನ ಕೃಷ್ಣಯ್ಯನ ಕಟ್ಟೆ ಬಳಿ ಮಂಗಳವಾರ ಸಂಜೆ ನಡೆದ ಬೈಕ್ ಅಪಘಾತದಲ್ಲಿ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.

Advertisement

ತಾಲೂಕಿನ ಕೃಷ್ಣಪುರ ಗ್ರಾಮದ ಉಪ್ಪಾರ ಬಡಾವಣೆಯ ನಿವಾಸಿ ಮಹೇಶ್(23) ಎಂಬ ಯುವಕನೇ ಮೃತಪಟ್ಟ ವ್ಯಕ್ತಿಯಾಗಿದ್ದಾನೆ.

ಕೃಷ್ಣಯ್ಯನ ಕಟ್ಟೆ ಬಳಿ ಇರುವ ಗಣಪತಿ ದೇಗುಲದ ತಿರುವಿನಲ್ಲಿ ಬೈಕ್ ನ ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ವಹಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next