Advertisement
ಶಾಂತಮ್ಮ (77) ಮೃತಪಟ್ಟವರು. ಕಾರಿನ ಚಾಲಕ ಶ್ರೀಕಾಂತ್ ಅವರು ಹೆಬ್ರಿ ಕಡೆಯಿಂದ ಆಗುಂಬೆ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ತನ್ನ ಮುಂದಿನಿಂದ ಅಂದರೆ ಆಗುಂಬೆ ಕಡೆಗೆ ಹೋಗುತಿದ್ದ ಆಟೋ ರಿಕ್ಷಾವನ್ನು ಹಿಂದಿಕ್ಕುವಾಗ ರಿಕ್ಷಾದ ಬಲಭಾಗಕ್ಕೆ ಢಿಕ್ಕಿ ಹೊಡೆದು ಎದುರಿನಿಂದ ಬರುತ್ತಿದ್ದ ಸರಕಾರಿ ಬಸ್ಸಿಗೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಶಾಂತಮ್ಮ ತೀವ್ರ ಗಾಯಗೊಂಡು ಹೆಬ್ರಿ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ನಡೆದ ಕೂಡಲೇ ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೆ ತಡವಾಗಿ ಬಂದಿದೆ.ಕೂಡಲೇ ತನ್ನ ಕಾರಿನಲ್ಲಿ ವೃದ್ಧೆಯನ್ನು ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಆ್ಯಂಬುಲೆನ್ಸ್‌ಗೆ ಹಾಕಿ ಆಸ್ಪತ್ರೆ ಸೇರಿಸಲಾಗಿದೆ. ಕೂಡಲೇ ಆ್ಯಂಬುಲೆನ್ಸ್ ಸೇವೆ ದೊರೆತು ತುರ್ತು ಚಿಕಿತ್ಸೆ ದೊರಕಿದ್ದರೆ ವೃದ್ಧೆ ಬದುಕಬಹುದಿತ್ತು ಎಂದು ಸ್ಥಳೀಯರಾದ ಪ್ರಮೋದ್ ಶೆಟ್ಟಿ ತಿಳಿಸಿದ್ದಾರೆ.