ಬಂಗಾರಪೇಟೆ: ಮಳೆ ಬಂದಾಗಲೆಲ್ಲ ತಾಲೂಕಿನ ರಸ್ತೆಗಳ ಕಳಪೆ ಪ್ರದರ್ಶನವಾಗುತ್ತದೆ. ಇದಕ್ಕೆ ಪಟ್ಟಣದಿಂದ ಕಾಮಸಮುದ್ರಕ್ಕೆ ಹೋಗುವ ರಸ್ತೆ ಸಾಕ್ಷಿಯಾಗಿದೆ.ಪಟ್ಟಣದಿಂದ ಕಾಮಸಮುದ್ರ ಹೋಬಳಿ ಕೇಂದ್ರಕ್ಕೆಸಂಪರ್ಕ ಕಲ್ಪಿಸುವ ಈ 15 ಕಿ.ಮೀ. ಮುಖ್ಯರಸ್ತೆಯುಅರ್ಧದಷ್ಟು ಹಾಳಾಗಿ,ಅಲ್ಲಲ್ಲಿ ಮೊಣಕಾಲುದ್ದ ಗುಂಡಿಗಳು ಬಿದ್ದು, ಅದರಲ್ಲಿ ಮಳೆ ನೀರು ತುಂಬಿಕೊಂಡು ವಾಹನಗಳ ಸಂಚಾರಕ್ಕೆ ಸಂಚಕಾರ ತರುವಂತಿದೆ.
ಒಂದು ಕಡೆ ಲೋಕೋಪಯೋಗಿ ಇಲಾಖೆ ಅನುದಾನದ ಕೊರತೆ ನಡುವೆಯೂ ಗ್ರಾಮೀಣ ಪ್ರಮುಖರಸ್ತೆಗಳಿಗೆ ಡಾಂಬರು ಹಾಕಿ ರಸ್ತೆಗಳ ಗುಣಮಟ್ಟಕ್ಕೆಶ್ರಮಿಸುತ್ತಿದ್ದರೆ. ಗುತ್ತಿಗೆದಾರರು ಕಳಪೆ ಕಾಮಗಾರಿಮಾಡಿ, ಡಾಂಬರು ಹಾಕಿದ ಕೆಲವೇ ದಿನಗಳಲ್ಲಿರಸ್ತೆಗಳು ಕಿತ್ತು ಹೋಗುವಂತೆ ಮಾಡಿದ್ದಾರೆ. ಮಳೆಬಂದಾಗ ರಸ್ತೆಗಳ ನಿಜ ಬಣ್ಣ ಬಯಲಾಗುತ್ತದೆ. ಇದುವಾಹನ ಸವಾರರ ಆಕ್ರೋಶಕ್ಕೂ ಕಾರಣವಾಗಿದೆ.
ರಸ್ತೆ ತುಂಬ ಗುಂಡಿ: ಪಟ್ಟಣದಿಂದ ಕಾಮಸಮುದ್ರಕ್ಕೆಹೋಗುವ ರಸ್ತೆ ದಿನ್ನಕೊತ್ತೂರು ಗ್ರಾಮದ ಬಳಿಸಂಪೂರ್ಣ ಗುಂಡಿ ಬಿದ್ದು ಹಾಳಾಗಿದೆ. ಎಲ್ಲಿ ನೋಡಿದರೂ ಗುಂಡಿಗಳೇ ಕಾಣುತ್ತವೆ. ರಸ್ತೆ ಎಲ್ಲಿ ಸರಿ ಇದೆಎಂದು ನೋಡಿಕೊಂಡು ವಾಹನಗಳನ್ನು ಓಡಿಸಬೇಕಿದೆ. ಇತ್ತೀಚಿಗೆ ಸುರಿದ ಮಳೆಯಿಂದ ಗುಂಡಿಗಳಲ್ಲಿನೀರು ತುಂಬಿಕೊಂಡು ರಸ್ತೆಕೆರೆಯಂತೆಕಾಣುತ್ತದೆ.
10 ಬಾರಿ ತೇಪೆ: ಹರಿದ ಚಾಪೆಯಂತಾಗಿರುವ ಈರಸ್ತೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳುಈವರೆಗೂ 10 ಬಾರಿ ತೇಪೆ ಹಾಕಿದ್ದಾರೆ. ಆದರೆ,ಯಾವುದೇ ಪ್ರಯೋಜನವಾಗಿಲ್ಲ, ಗುಂಡಿ ಮುಚ್ಚಿದಕೇವಲ ವಾರದೊಳಗೆ ಮತ್ತೆ ಕಾಣಿಸಿಕೊಂಡು, ರಸ್ತೆಮೊದಲ ಸ್ಥಿತಿಗೆ ಬರುತ್ತಿದೆ. ಆದರೆ, ಲೋಕೋಪಯೋಗಿ ಇಲಾಖೆ ಮಾತ್ರ ಗುತ್ತಿಗೆದಾರನ ಮೇಲೆಯಾವುದೇಕ್ರಮಕೈಗೊಂಡಿಲ್ಲ.ಅಧಿಕಾರಿಗಳಿಗೆ ಹಿಡಿಶಾಪ: ಇದೇ ಮಾರ್ಗದಲ್ಲಿಪರವನಹಳ್ಳಿ ಕೆರೆ ಕಟ್ಟೆ ಬಳಿ ಹಾಗೂ ಪುತ್ರಸೊಣ್ಣೆನಹಳ್ಳಿಬಳಿಯಂತೂ ರಸ್ತೆ ಸ್ಥಿತಿ ಹೇಳ ತೀರದಾಗಿದೆ.ವರದಾಪುರ ಗೇಟ್‌ಬಳಿಯೂ ವಾಹನಗಳ ಸವಾರರು ಜನಪ್ರತಿನಿಧಿಗಳನ್ನು ಶಪಿಸಿಕೊಂಡೇ ಹೋಗುವುದುನಿತ್ಯಕಾಯಕವಾಗಿದೆ.
ಶಾಸಕರು ಹೇಳಿಕೆಗೆ ಸೀಮಿತ: ರಾತ್ರಿಯ ವೇಳೆ ರಸ್ತೆಮಧ್ಯದಲ್ಲಿರುವ ಗುಂಡಿಗಳು ತಿಳಿಯದೇ ದ್ವಿಚಕ್ರವಾಹನ ಸವಾರರು ಬಿದ್ದು ಗಾಯಗೊಂಡಿರುವಉದಾಹರಣೆಗಳೂ ಇವೆ. ಕಳಪೆ ಕಾಮಗಾರಿ ಕಂಡರೆಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಹಲವು ಬಾರಿ ಶಾಸಕರು ಹೇಳಿದ್ದರೂಇದುವರೆಗೂ ಯಾರನ್ನು ಸೇರಿಸಿದಂತೆ ಕಂಡು ಬಂದಿಲ್ಲ.ಕೋಟ್ಯಂತರ ರೂ. ಸಾರ್ವಜನಿಕರ ತೆರಿಗೆ ಹಣಖರ್ಚು ಮಾಡಿ ಅಭಿವೃದ್ಧಿ ಪಡಿಸುವ ರಸ್ತೆಗಳು,ಗುತ್ತಿಗೆದಾರನ ಕಳಪೆ ಕಾಮಗಾರಿಯಿಂದವರ್ಷದೊಳಗೆಕಿತ್ತು ಹೋಗುತ್ತಿವೆ. ಇದನ್ನು ನೋಡಿದ್ರೆಜನರ ಹಣ ನೀರಲ್ಲಿ ಹೋಮ ಮಾಡಿದಂತೆಕಾಣುತ್ತದೆ. ಇನ್ನಾದರೂ ಅಧಿಕಾರಿಗಳು ಗುಣಮಟ್ಟದರಸ್ತೆಗಳಿಗೆ ಆದ್ಯತೆ ನೀಡಲಿ, ಅವ್ಯವಸ್ಥೆಯಿಂದಕೂಡಿರುವ ರಸ್ತೆಗಳಿಗೆ ಮೋಕ್ಷ ನೀಡಿ ವಾಹನಗಳುಮುಕ್ತವಾಗಿ ಸಂಚರಿಸಲು ಅನುವು ಮಾಡಿಕೊಡಲಿಎಂಬುದು ವಾಹನ ಸವಾರರು ಒತ್ತಾಯ.