Advertisement
ರಿಲಯನ್ಸ್ ಪೆಟ್ರೋಲ್ ಬಂಕ್‌ನಿಂದ ನಗರ ಠಾಣೆವರೆಗೆ ರಸ್ತೆ ಅಗಲೀಕರಣ ಮಾಡುವಾಗ ಎರಡೂ ಭಾಗದಲ್ಲೂ ಅಗಲೀಕರಣ ಮಾಡಬೇಕು. ಒಂದೇ ಭಾಗದಲ್ಲಿ ಅಗಲೀಕರಣ ಮಾಡುವುದರಿಂದ ಜ್ಯೂನಿಯರ್ ಕಾಲೇಜು, ತಹಶೀಲ್ದಾರ್ ಕಚೇರಿ, ನ್ಯಾಯಾಲಯ ಆವರಣ, ಪೊಲೀಸ್ ಸ್ಟೇಷನ್ ಜಾಗ ಹೆಚ್ಚು ರಸ್ತೆಗೆ ಹೋಗುತ್ತದೆ ಎಂಬ ಕುರಿತು ವಕೀಲರ ಸಂಘ, ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಎರಡೂ ಭಾಗದಲ್ಲೂ ಅಗಲೀಕರಣ ಕೈಗೊಳ್ಳಬೇಕು ಎಂದು ಹೈಕೋರ್ಟ್ ನ್ಯಾಯವಾದಿ ಕೆ.ದಿವಾಕರ್ ಸೇರಿದಂತೆ ಸ್ಥಳೀಯ ವಕೀಲರು ಹೈಕೋರ್ಟ್‌ಗೆ ದಾವೆ ಸಲ್ಲಿಸಿದ್ದರು. ರಾಜ್ಯ ಉಚ್ಚ ನ್ಯಾಯಾಲಯ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿತ್ತು.
Advertisement
High Court ತಡೆಯಾಜ್ಞೆ ಮೀರಿ ರಸ್ತೆ ಅಗಲೀಕರಣ ಕಾಮಗಾರಿ; ನಗರ ಠಾಣೆಗೆ ದೂರು
04:12 PM Aug 16, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.