Advertisement
ಬೆಂಗಳೂರು-ಮೈಸೂರಿನವರೆಗೆ ರಾಮನಗರ, ಮಂಡ್ಯ ಎರಡು ಕಡೆ ಬೈಪಾಸ್ ರಸ್ತೆ ಬರಲಿದೆ. ಒಟ್ಟು 32 ಕಿ.ಮೀ ಉದ್ದದ ಬೈಪಾಸ್ ರಸ್ತೆ ನಿರ್ಮಾಣವಾಗುತ್ತಿದೆ. ರಾಮನಗರದ ಜೈಪುರ ಗ್ರಾಮದಿಂದ ಚನ್ನಪಟ್ಟಣದ ಭೈರಾಪಟ್ಟಣವರೆಗೆ22ಕಿ.ಮೀ ಉದ್ದದಒಂದು ಬೈಪಾಸ್ ಬಂದರೆ, ಮಂಡ್ಯದಲ್ಲಿ 10 ಕಿ.ಮೀ ಬೈಪಾಸ್ ರಸ್ತೆ ನಿರ್ಮಾಣವಾಗಲಿದೆ. ಬೆಂಗಳೂರಿನಿಂದಮೈಸೂರಿನವರೆಗೆ ಸುಮಾರು 8.5 ಕಿ.ಮೀಮೇಲ್ಸುತುವೆ ಬರಲಿದೆ. ಮಂಡ್ಯದಲ್ಲಿ ಎರಡು ಕಡೆ ಮೇಲ್ಸುತುವೆ ಬರಲಿದೆ.
Related Articles
Advertisement
ಮರು ಸರ್ವೆಗೆ ಆಗ್ರಹ: ಪರಿಹಾರದಲ್ಲಿ ತಾರತಮ್ಯ ಮಾಡಿರುವುದರಿಂದ ಮರು ಸರ್ವೆ ನಡೆಸಿ ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು. ಅದರಂತೆ ಖಾಸಗಿ ಏಜೆನ್ಸಿಗೆ ಮರು ಪರಿಶೀಲನೆ ನಡೆಸಲು ಸೂಚಿಸಲಾಗಿತ್ತು. ಆದರೆ, ಅದು ಇನ್ನೂ ಕಾರ್ಯಗತವಾಗಿಲ್ಲ. ಇದರ ಬಗ್ಗೆಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರನೀಡುತ್ತಾರೆ. ಸೂಕ್ತ ಪರಿಹಾರ ಸಿಗುವವರೆಗೂಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ನಗರದ ವ್ಯಾಪಾರದ ಮೇಲೆ ಹೊಡೆತ : ಮಂಡ್ಯದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಾಣವಾಗುತ್ತಿರುವುದರಿಂದ ಮಂಡ್ಯ ನಗರದ ವ್ಯವಹಾರಕ್ಕೆ ಪೆಟ್ಟು ಬೀಳಲಿದೆ. ಹೋಟೆಲ್‌ಗಳು, ಡಾಬಾಗಳು, ಸಣ್ಣಪುಟ್ಟ ಅಂಗಡಿಗಳು, ಕಾಫಿ, ಟೀ ಮಾರಾಟಗಾರರು ಸೇರಿದಂತೆ ಎಲ್ಲ ರೀತಿಯ ವ್ಯಾಪಾರ-ವಹಿವಾಟುಕುಸಿತಗೊಳ್ಳಲಿದೆ. ಇದರಿಂದ ವರ್ತಕರಿಗೆ ಆತಂಕ ಶುರುವಾಗಿದೆ. ಬೆಂಗಳೂರು ಹೆದ್ದಾರಿ ಇಕ್ಕೆಲಗಳಲ್ಲಿ ಹೋಟೆಲ್‌ಗಳು, ಶೋರೂಂಗಳು, ಮಾಲ್‌ಗಳು, ಬೇಕರಿಗಳು, ಹಣ್ಣು, ಹೂ, ತರಕಾರಿ ಅಂಗಡಿಗಳು, ಬೀದಿಬದಿ ವ್ಯಾಪಾರಿಗಳು, ಫಾಸ್ಟ್‌ಫುಡ್ ಅಂಗಡಿಗಳು, ಇತರೆ ವಾಣಿಜ್ಯ ಅಂಗಡಿಗಳಿವೆ. ಈ ಎಲ್ಲ ವ್ಯಾಪಾರಸ್ಥರು ಮಂಡ್ಯ ನಗರದ ಜನತೆ ಅಲ್ಲದೆ, ಬೆಂಗಳೂರು-ಮೈಸೂರು ಸಂಚರಿಸುವ ವಾಹನ ಸವಾರರು, ಪ್ರಯಾಣಿಕರನ್ನು ಅವಲಂಬಿಸಿದ್ದರು. ಆದರೆಬೈಪಾಸ್ ರಸ್ತೆ ನಿರ್ಮಾಣವಾಗುವುದರಿಂದ ಈ ಎಲ್ಲವ್ಯಾಪಾರಿಗಳಿಗೆ ವ್ಯವಹಾರಕ್ಕೆ ತೊಂದರೆಯಾಗಲಿದೆ.
ನಿರಾಶ್ರಿತರ ಪಟ್ಟಿಗೆ ಸೇರಿಸಿ, ಉದ್ಯೋಗದಲ್ಲಿ ಮೀಸಲಾತಿ ನೀಡಿ : ಅಧಿಕಾರಿಗಳು ಮೌಲ್ಯಮಾಪನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಬೇರೆಯವರಿಗೆ ಚದರಡಿಗೆ 1500 ರೂ. ನೀಡಿ, ನಮಗೆ ಗುಂಟೆ ಲೆಕ್ಕದಲ್ಲಿ ಹಣನೀಡಲಾಗಿದೆ. ಇದರಿಂದ ಅಡಿಗೆಕೇವಲ 235 ರೂ. ನೀಡುವ ಮೂಲಕ ತಾರತಮ್ಯ ಎಸಗಿದ್ದಾರೆ. ಆರಂಭದಲ್ಲಿ ಹೆಚ್ಚಿನ ಪರಿಹಾರ ನೀಡಲಾಗುವುದು ಎಂದು ಹೇಳಿ ಭೂಮಿ ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಪುನರ್ವಸತಿ ಕಲ್ಪಿಸಿಕೊಡುತ್ತೇವೆ ಎಂದು ಹೇಳಿದ್ದರು. ಅದನ್ನು ಮಾಡುತ್ತಿಲ್ಲ. ಆದ್ದರಿಂದ ಕೂಡಲೇ ಮರುಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು. ಮನೆ ಕಳೆದುಕೊಂಡವರನ್ನು ನಿರಾಶ್ರೀತರ ಪಟ್ಟಿಗೆ ಸೇರಿಸಿ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದುಬೂದನೂರು ಗ್ರಾಮದಲ್ಲಿ ಮನೆ ಕಳೆದು ಕೊಂಡಬಿ.ಎಂ.ರಾಜಾಆಗ್ರಹಿಸಿದ್ದಾರೆ.
ಈಗಾಗಲೇಕಾಮಗಾರಿ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷದೊಳಗೆಕಾಮಗಾರಿ ಮುಗಿಯುವ ಸಾಧ್ಯತೆ ಇದೆ. ಭೂ ಸ್ವಾಧೀನಪಡಿಸಿಕೊಂಡ ರೈತರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಬೂದನೂರು ಗ್ರಾಮದಲ್ಲಿ ಮರು ಪರಿಶೀಲನೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಗೊಂದಲ ನಿವಾರಿಸಲಾಗುವುದು. –ಶ್ರೀಧರ್, ಯೋಜನಾ ನಿರ್ದೇಶಕ, ಹೆದ್ದಾರಿ ಪ್ರಾಧಿಕಾರ
ನಮಗೆ ಸೂಕ್ತ ಪರಿಹಾರ ನೀಡಿಲ್ಲ. ಇದರ ಬಗ್ಗೆ ಕೇಳಿದರೆ ಡೀಸಿ ನ್ಯಾಯಾಲಯದಲ್ಲಿ ಪ್ರಕರಣದಾಖಲಿಸಿ ಎಂದಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿದರೂ ವಿಚಾರಣೆ ನಡೆಸಿಲ್ಲ. ನಮ್ಮೆಲ್ಲರ ಬಳಿ ಮನೆಗಳಖಾತೆ ಇದ್ದು, ಪ್ರತಿ ವರ್ಷ ಕಂದಾಯಕಟ್ಟಿದ್ದೇವೆ. ಆದರೂ, ಪರಿಹಾರ ನೀಡಲು ತಾರತಮ್ಯ ಎಸಗಿದ್ದಾರೆ. –ಬಿ.ಪಿ.ಅನಂತರಾಜು, ಬೂದನೂರು ಗ್ರಾಮ
ಕಳೆದ 15 ವರ್ಷಗಳಿಂದ ಹೆದ್ದಾರಿಯಲ್ಲಿಕಾಫಿ,ಟೀ ಮಾರುತ್ತಾ ಜೀವನ ಸಾಗಿಸುತ್ತಿದ್ದೇವೆ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಂದಲೇ ವ್ಯಾಪಾರವಾಗುತ್ತಿತ್ತು. ಆದರೆ,ಈಗಬೈಪಾಸ್ ರಸ್ತೆ ನಿರ್ಮಾಣದಿಂದ ವಾಹನಗಳು ಆ ಭಾಗದಲ್ಲಿ ಸಂಚರಿಸುವುದರಿಂದ ನಮ್ಮ ವ್ಯಾಪಾರಕ್ಕೆ ತೊಂದರೆಯಾಗಲಿದೆ. –ಕುಮಾರ್, ಟೀ ಅಂಗಡಿ ಮಾಲೀಕ
ನಮ್ಮ ಹೋಟೆಲ್‌ಗೆ ನಿತ್ಯ ಬೆಂಗಳೂರು- ಮೈಸೂರಿನಿಂದ ಗ್ರಾಹಕರು ಬರುತ್ತಿದ್ದರು. ಬೈಪಾಸ್ ರಸ್ತೆ ನಿರ್ಮಾಣದಿಂದ ಗ್ರಾಹಕರ ಸಂಖ್ಯೆಕಡಿಮೆಯಾಗಲಿದೆ. ಅಲ್ಲದೆ, ಬೆಂಗಳೂರು-ಮೈಸೂರು ಎಷ್ಟೋ ಮಂದಿ ಹೆದ್ದಾರಿ ವ್ಯಾಪಾರವನ್ನೇ ನಂಬಿಕೊಂಡಿರುವವರು ಸಾಕಷ್ಟು ಮಂದಿ ಇದ್ದಾರೆ. –ಪ್ರದೀಪ್, ದಯಾನಂದ ಮೆಸ್, ಹೋಟೆಲ್ ಮಾಲೀಕ
–ಎಚ್.ಶಿವರಾಜು