Advertisement

ಗೂಡು ಕಳೆದುಕೊಂಡ ಪಕ್ಷಿಗಳ ಆರ್ತನಾದ

05:10 PM Mar 06, 2021 | Team Udayavani |

ಚಿಕ್ಕನಾಯಕನಹಳ್ಳಿ: ಪಟ್ಟಣದ ಬಿ. ಎಚ್‌ ರಸ್ತೆಯಲ್ಲಿನ ಸಾಲು ಮರಗಳಲ್ಲಿ ಹಲವಾರು ದಶಕಗಳಿಂದ ಸಾವಿರಾರು ಪಕ್ಷಿಗಳು ಗೂಡು ಕಟ್ಟಿಕೊಂಡು ವಾಸಿಸುತ್ತಿದ್ದವು.ರಸ್ತೆ ಅಭಿವೃದ್ಧಿಗಾಗಿ ಮರಗಳಿಗೆ ಕೊಡಲಿ ಪೆಟ್ಟು ಬಿದ್ದಕಾರಣ ಗೂಡು ಕಳೆದುಕೊಂಡ ವಿವಿಧ ಜಾತಿಯ ಪಕ್ಷಿಗಳು ಗಾಸಿಯಾಗಿ ಬಾನಲ್ಲಿಹಾರಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

Advertisement

ರಸ್ತೆ ಅಭಿವೃದ್ಧಿಯಾಗಬೇಕು ಎಂದರೆ ರಸ್ತೆಗಳಿಗೆ ಅಡ್ಡವಾಗಿರುವ ಮರಗಳನ್ನು ಕಡಿಯುವುದು ಅನಿವಾರ್ಯ. ಪಟ್ಟಣದಲ್ಲಿ ಹಾದು ಹೋಗುತ್ತಿರುವ 150 ಎ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ನೂರಾರು ಮರಗಳು ಧರೆಗುರುಳಿವೆ. ಶೆಟ್ಟಿಕೆರೆ ಗೇಟ್‌ , ತಾತಯ್ಯನ ಗೋರಿ ಹಾಗೂ ಖಾಸಗಿ ಬಸ್‌ನಿಲ್ದಾಣದ ಬಳಿ ಹಲವಾರು ದಶಕಗಳಿಂದ ಬೆಳೆದು ನಿಂತಿದ್ದ ಅರಳಿ ಹಾಗೂ ಬೇವಿನ ಮರಗಳನ್ನೂ ಕತ್ತರಿಸಲಾಗಿದೆ . ಈ ಮರಗಳಲ್ಲಿವಿವಿಧ ಜಾತಿಯ ನೂರಾರು ಪಕ್ಷಿಗಳು ವಾಸ  ಮಾಡುತ್ತಿದ್ದವು ಈಗ ಅವುಗಳಿಗೆ ರಾತ್ರಿ ಕಳೆಯಲು ಜಾಗವಿಲ್ಲದಾಗಿದೆ.

ಆಹಾರ ಹುಡುಕಿಕೊಂಡು ಬರುವಷ್ಟರಲ್ಲಿ ಗೂಡು ನಾಪತ್ತೆ: ಸೂರ್ಯ ಹುಟ್ಟುವ ಮೊದಲೇ, ಗೂಡು ಬಿಟ್ಟು ತನಗೆ ಹಾಗೂ ತನ್ನ ಮರಿಗಳಿಗೆ ಆಹಾರವನ್ನು ಸಂಗ್ರಹಿಸಿಕೊಂಡು ಬರಲು ಹೋದ ಪಕ್ಷಿಗಳಿಗೆ ಸಂಜೆ ಬಂದು ನೋಡಿದರೆ. ದಶಕಗಳಿಂದ ವಾಸಕ್ಕೆ ಆಸರೆಯಾಗಿದ್ದ ಮರವೇ ಧರೆಗುರುಳಿಬಿದ್ದಿರುವುದನ್ನು ಕಂಡು ದಿಕ್ಕು ತೋಚದೆ ಮರ ಇದ್ದ ಜಾಗದಲ್ಲಿ ನೂರಾರು ಪಕ್ಷಿಗಳುರೆಕ್ಕೆ ಬಡೆದುಕೊಂಡು ಅಸಾಯಕಥೆ ವ್ಯಕ್ತಪಡಿಸಿದವು.

ನಗರ ಸೌಂದರ್ಯಕ್ಕೆ ಮರಗಳು ಅಗತ್ಯ :

ಪಟ್ಟಣಗಳಲ್ಲಿ ನೆರಳು ನೀಡುವ ಮರಗಳನ್ನು ಕಡೆಯುವ ಬದಲು ಅಧುನಿಕತೆಯನ್ನು ಬಳಸಿಕೊಂಡು ಮರಗಳನ್ನು ಉಳಿಸಿಕೊಂಡು ರಸ್ತೆ ಅಭಿವೃದ್ಧಿಗೆ ಪ್ರಯತ್ನ ಪಡಬೇಕಾಗಿದೆ. ಗಿಡ ನೆಟ್ಟ ಕೆಲ ದಿನಗಳಲ್ಲಿ ಮರವಾಗಿ ನೆರಳು ನೀಡುವುದಿಲ್ಲ ಒಂದು ಮರ ಬೆಳೆದು ದೊಡ್ಡದಾಗಲು ಹಲವಾರು ವರ್ಷಗಳೆ ಬೇಕು. ಇದು ಎಲ್ಲಾರಿಗೂ ತಿಳಿದಿರುವ ವಿಷಯ. ರಸ್ತೆಅಗಲಿಕರಣವಾದರೂ ಮರಗಳು ಧರೆಗೆ ಬಿದ್ದ ಜಾಗದಲ್ಲಿ ಮರವನ್ನು ಬೆಳೆಸಿ ಪಟ್ಟಣದ ಸೌಂದರ್ಯವನ್ನು ಅಭಿವೃದ್ಧಿಪಡಿಸಬೇಕು ಎಂಬುವುದು ಸಾರ್ವಜನಿಕರ ಹಾಗೂ ಪರಿಸರ ಪ್ರೇಮಿಗಳ ಮನವಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next