ಹರಪನಹಳ್ಳಿ: ಅರಸೀಕೆರೆ ಹೋಬಳಿಯನ್ನು ದಾವಣಗೆರೆ ಜಿಲ್ಲೆಗೆ ಸೇರಿಸುವ ಕುರಿತು ಚರ್ಚೆ ನಡೆಯುತ್ತಿದೆ. ಈ ಕುರಿತು ಜನಾಭಿಪ್ರಾಯ ಸಂಗ್ರಹಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.
ತಾಲೂಕಿನ ತವಡೂರು ಗ್ರಾಮದಲ್ಲಿ ಅರಸೀಕೆರೆ-ಕಂಚಿಕೆರೆ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಕೋವಿಡ್ ಹಾವಳಿ ಇದ್ದರೂ ಬಿಜೆಪಿ ಸರ್ಕಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದರು.
ಕಳೆದ ಕೆಲ ವರ್ಷಗಳಿಂದ ರಸ್ತೆ ನಿರ್ಮಾಣ ಮಾಡುವಂತೆ ವಿವಿಧ ಸಂಘ, ಸಂಸ್ಥೆ,ಹೋರಾಟದ ಫಲವಾಗಿ ಅರಸೀಕೆರೆ ಕಂಚಿಕೇರಿರಸ್ತೆ ಶಂಕುಸ್ಥಾಪನೆ ಕಾಲ ಕೂಡಿ ಬಂದಿದೆ.ಇನ್ನೇನು ಕೆಲವೇ ದಿನಗಳಲ್ಲಿ ಅರಸೀಕೆರೆಕಂಚಿಕೇರಿ ರಸ್ತೆ ಸಂಚಾರಕ್ಕೆ ಯೋಗ್ಯವಾಗಲಿದೆ ಎಂದು ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರಪ್ಪ ಮಾತನಾಡಿ, ಜಗಳೂರು ವಿಧಾನಸಭಾ ಕ್ಷೇತ್ರದ ಕಟ್ಟಕಡೆ ಗ್ರಾಮದ ಗಡಿಭಾಗವನ್ನೂ ಸಂಪೂರ್ಣ ಅಭಿವೃದ್ಧಿ ಪಡಿಸುವುದೇ ನನ್ನ ಗುರಿಯಾಗಿದೆ. ಅರಸೀಕೆರೆ 7 ಪಂಚಾಯಿತಿ ವ್ಯಾಪ್ತಿಯ ಉಚ್ಚಂಗಿದುರ್ಗಕ್ಕೆ 1 ಕೋಟಿ, ಅರಸೀಕೆರೆಗೆ 1.4 ಕೋಟಿ, ಹೋಬಳಿ ವ್ಯಾಪ್ತಿಯ ಸರ್ಕಾರಿ ಶಾಲೆ ಅಭಿವೃದ್ಧಿಗೆ 90 ಲಕ್ಷ, ಅಂಗನವಾಡಿ ಕೇಂದ್ರಗಳಿಗೆ 70 ಲಕ್ಷ, ಬ್ಲಾಕ್ ಹಳ್ಳದ ರಸ್ತೆಗಳಿಗೆ 2 ಕೋಟಿ, ಬೇವಿನಹಳ್ಳಿ, ಉಚ್ಚಂಗಿದುರ್ಗ, ಬಿಕ್ಕಿಮಟ್ಟಿ, ಅರಸೀಕೆರೆ, ತವಡೂರಿನ ಎಸ್.ಸಿ, ಎಸ್.ಟಿ ಕಾಲೊನಿಗಳಿಗೆ 2.50 ಕೋಟಿ ವೆಚ್ಚದಲ್ಲಿ ಕೋವಿಡ್ ಸಂಕಷ್ಟದ ನಡುವೆಯೂ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಅರಸೀಕೆರೆ, ಯು.ಕಲ್ಲಹಳ್ಳಿ, ನರೇಬೋಮ್ಮನಹಳ್ಳಿ, ದಿದ್ದಿಗಿ ತಾಂಡಾ, ಹೋಸಕೋಟೆ ಗ್ರಾಮಗಳ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಲಾಯಿತು. ಜಿ.ಪಂ ಸದಸ್ಯ ಡಿ.ಸಿದ್ದಪ್ಪ, ಬಿಜೆಪಿ ಮಂಡಲ ಅಧ್ಯಕ್ಷಮಹೇಶ್, ತಾ.ಪಂ ಸದಸ್ಯ ಪಾಟೀಲ್ ಕೆಂಚನಗೌಡ, ರಹಮತ್‌ವುಲ್ಲಾ, ಎಇಇ ಲಿಂಗಪ್ಪ, ಎಂಜಿನಿಯರ್ ಮಹೇಶ ನಾಯ್ಕ,ಮುಖಂಡರಾದ ಚಟ್ನಿಹಳ್ಳಿ ರಾಜಪ್ಪ, ವೈ.ಡಿ.ಅಣ್ಣಪ್ಪ, ನಂದಿಕಂಬ ಚಂದ್ರ ನಾಯ್ಕ, ಬಾಲೆನಹಳ್ಳಿ ಕೆಂಚನಗೌಡ, ಗೋಪಿನಾಯ್ಕ, ಫಣಿಯಾಪುರ ಲಿಂಗರಾಜ,ಮಂಜುನಾಥಯ್ಯ, ಶಿವಯೋಗಿ,ರಾಜನಾಯ್ಕ, ವಿಶ್ವನಾಥಯ್ಯ, ಅನಂದಪ್ಪ, ಸಿದ್ದಪ್ಪ, ಕೊಟ್ರಯ್ಯಸ್ವಾಮಿ, ಬಾಲಚಂದ್ರಯ್ಯ, ರಾಜಶೇಖರ್ ಪಾಟೀಲ್ ಇದ್ದರು.