ಚೇಳೂರು: ಇತ್ತೀಚಿಗೆ ಸುರಿದ ಮಳೆಯಿಂದ ಪಾಪಾಗ್ನಿ ನದಿ ತುಂಬಿ ಹರಿದು ಆಂಧ್ರ, ಕರ್ನಾಟಕ ಗಡಿಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಗಣೇಶನ ಗುಡಿ ರಸ್ತೆಕೊಚ್ಚಿಕೊಂಡು ಹೋಗಿ ಉಭಯ ರಾಜ್ಯಗಳ ಜನರಿಗೆ ತುಂಬ ತೊಂದರೆ ಆಗಿತ್ತು.
ಎರಡು ತಿಂಗಳಿಂದ ನದಿಯಲ್ಲಿ ನೀರು ಹರಿಯುತ್ತಲೇಇದ್ದು, ರಸ್ತೆ ಸಂಪರ್ಕ ಇಲ್ಲದೆ ಆಂಧ್ರದ ತಿರುಪತಿ, ಮದನಪಲ್ಲಿ, ಬಿ.ಕೊತ್ತಕೋಟೆಗೆ ಜನ ಹೋಗಿ ಬರಲುಆಗುತ್ತಿರಲಿಲ್ಲ. ಇದನ್ನು ಗಮನಿಸಿದ ಸ್ಥಳೀಯ ಕಾಂಗ್ರೆಸ್ ನಾಯಕರು, ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಟಾರೆಡ್ಡಿಅವರಿಗೆ ತಿಳಿಸಿದ್ದಾರೆ.
ಚೇಳೂರು ಗಣೇಶನ ದೇವಾಲಯದಿಂದ ಕಾಲುಕಿ.ಮೀ. ಇರುವ ಪಾಪಾಗ್ನಿ ನದಿಗೆ 20 ದಿನದಿಂದ ನದಿಗೆಅಡ್ಡಲಾಗಿ, ಲಂಕೆಗೆ ಹೋಗಲು ವಾನರ ಸೈನ್ಯ ರಸ್ತೆನಿರ್ಮಿಸಿದಂತೆ ಗ್ರಾಮಸ್ಥರು ಪೈಪ್‌ಗ್ಳನ್ನು ಹಾಕಿ, ಭಾರೀಗಾತ್ರದ ಕಲ್ಲು, ಮಣ್ಣನ್ನು ಹಾಕಿ ರಸ್ತೆ ನಿರ್ಮಿಸುತ್ತಿದ್ದಾರೆ.ಇದಕ್ಕೆ ಶಾಸಕ ಸುಬ್ಟಾರೆಡ್ಡಿ ಹಣವನ್ನು ಒದಗಿಸಿದ್ದು, ಚೇಳೂರು ಹಿರಿಯ ಮುಖಂಡ ಕೆ.ಜಿ.ವೆಂಕಟರವಣ,ಯುವ ಕಾಂಗ್ರೆಸ್ ಮುಖಂಡರಾದ ಸುರೇಂದ್ರ, ಜೆ.ಎನ್.ಜಾಲಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2 ತಿಂಗಳಿಂದ ನಾವು ಚೇಳೂರಿಗೆ ಬರಲು 45 ಕಿ.ಮೀ.ಸುತ್ತು ಹಾಕಬೇಕಿತ್ತು. ಪಾಪಾಗ್ನಿ ನದಿಗೆ ಅಡ್ಡಲಾಗಿನಿರ್ಮಿಸಿರುವ ರಸ್ತೆ ಸರಿಪಡಿಸಿದ್ದರಿಂದ ಕೇವಲ 3 ಕಿ.ಮೀ.ಆಗುತ್ತದೆ. ವ್ಯಾಪಾರ ವಹಿವಾಟಿಗೂ ತುಂಬಾತೊಂದರೆಯಾಗಿತ್ತು. ಈ ರಸ್ತೆ ಸಂಚಾರದಿಂದ ರಾಜ್ಯದಗಡಿ ಪ್ರದೇಶವಾದ ಚೇಳೂರಿಗೆ ಬರಲು ಬಹಳಅನುಕೂಲವಾಗಿದೆ ಎಂದು ಆಂಧ್ರ ಪ್ರದೇಶದ ನವಾಬುಕೋಟೆಯ ನರೇಶ್, ವೆಂಕಟರವಣ, ರವಿ ಮತ್ತಿತರರು ಬಾಗೇಪಲ್ಲಿ ಶಾಸಕರ ಕಾರ್ಯವನ್ನು ಶ್ಲಾಘಿಸಿದ್ದಾರೆ.