Advertisement

Road collision: ಹೆದ್ದಾರಿ ಟೋಲ್‌ ಬಳಿ ಅಪರಿಚಿತ ವಾಹನ ಡಿಕ್ಕಿ : ಸ್ಥಳದಲ್ಲೇ ನಾಲ್ವರು ಸಾವು

09:03 AM Oct 18, 2023 | Kavyashree |

ವಿಜಯಪುರ: ನಗರದ ಹೊರ ವಲಯದಲ್ಲಿರುವ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ಮೃತಪಟ್ಟ ಘಟನೆ ಆ.147ರ ಮಂಗಳವಾರ ರಾತ್ರಿ ಸಂಭವಿಸಿದೆ.‌

Advertisement

ಅಪಘಾತದಲ್ಲಿ ಮೃತರಾದವರನ್ನು ನಗರದ ವಜ್ರಹನುಮಾನ ಪ್ರದೇಶದ ನಿವಾಸಿಗಳಾದ ಶಿವಾನಂದ ಚೌಧರಿ ( 25) ಸುನೀಲ ಖಾನಾಪೂರ(26) ಈರಣ್ಣ ಕೋಲಾರ (26) ಪ್ರವೀಣ ಪಾಟೀಲ್ (30) ಎಂದು ಗುರುತಿಸಲಾಗಿದೆ.

ಹಿಟ್ನಳ್ಳಿ ಟೋಲ್ ಬಳಿ ಮಂಗಳವಾರ ರಾತ್ರಿ ಈ ಭೀಕರ ದುರ್ಘಟನೆ ಸಂಭವಿಸಿದೆ. ಟೋಲ್‌ ಬಳಿಯ ಸರ್ವೀಸ್ ರಸ್ತೆಯ ಡಿವೈಡರ್ ಮೇಲೆ ನಾಲ್ವರು ಕುಳಿತಿದ್ದಾಗ ಅಪರಿಚಿತ ವಾಹನ ಹರಿದು ನಾಲ್ವರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಸ್ಥಳದಲ್ಲೇ ನಾಲ್ವರು ಸಾವು

ಟ್ರಕ್ ನಾಲ್ವರ ಬೈಕ್ ಮೇಲೂ ಹರಿದು ಅಪರಿಚಿತ ವಾಹನ ಸವಾರ ವಾಹನ ಸಮೇತ ಪರಾರಿಯಾಗಿದ್ದಾನೆ.

Advertisement

ಯುವಕರು ಟೋಲ್ ನಾಕಾ ಬಳಿ ಇರುವ ಡಾಬಾದಲ್ಲಿ ಊಟಕ್ಕೆಂದು ಬೈಕ್ ನಲ್ಲಿ ಹೋಗಿದ್ದಾಗ ಈ ದುರಂತ ಸಂಭವಿಸಿದೆ.

ಅಪಘಾತದಲ್ಲಿ ಪಲ್ಸರ್ ಹಾಗೂ ಸಿಬಿಝಡ್ ಬೈಕ್ ಜಖಂಗೊಂಡಿದೆ.

ಸ್ಥಳಿಯರ ಮಾಹಿತಿ ಪ್ರಕಾರ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದ್ದು, ಅಪಘಾತಕ್ಕೆ ಕಾರಣವಾದ ಪರಾರಿಯಾಗಿರುವ ಲಾರಿ MH12 QW 8521 ಸಂಖ್ಯೆ ಹೊಂದಿತ್ತು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಸುದ್ದಿ ತಿಳಿಯುತ್ತಲೇ ವಿಜಯಪುರ ಗ್ರಾಮೀಣ ವಿಭಾಗದ ಡಿವೈಎಸ್ಪಿ ಗಿರಿಮಲ್ಲ ತಳಕಟ್ಟಿ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಸಂಭವಿಸಿದೆ‌

Advertisement

Udayavani is now on Telegram. Click here to join our channel and stay updated with the latest news.

Next