Advertisement

ಅಧಿಕ ಭಾರದ ವಾಹನಗಳ ಓಡಾಟದಿಂದ ಕುಸಿಯುತ್ತಿದೆ ರಸ್ತೆಯ ಸೇತುವೆಗಳು

03:45 AM Jul 15, 2017 | Team Udayavani |

ಕೋಟ: ಕೋಟ-ಗೋಳಿಯಂಗಡಿ  ಹಾಗೂ ಬ್ರಹ್ಮಾವರ -ಜನ್ನಾಡಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಅಧಿಕ ಭಾರದ ಸರಕುಗಳನ್ನು ಸಾಗಾಟ ನಡೆಸುವ ವಾಹನಗಳ ಓಡಾಟ ಹೆಚ್ಚಿದ್ದು ಇದರಿಂದಾಗಿ ಇಲ್ಲಿನ ಪ್ರಮುಖ ಸೇತುವೆಗಳು ಕುಸಿಯುವ ಭೀತಿಯಲ್ಲಿದೆ ಹಾಗೂ ಹೊಸದಾಗಿ ದುರಸ್ತಿಗೊಳಿಸಿದ ರಸ್ತೆ ಕೂಡ  ಹಾಳಾಗು¤ತಿದೆ. ಈ ಕುರಿತು ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಗೆ ಹಲವು  ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ.

Advertisement

20 ಟನ್‌ ಸಾಮರ್ಥ್ಯದ 
ರಸ್ತೆಯಲ್ಲಿ 40-45  ಟನ್‌  ಸಾಗಾಟ

ಬ್ರಹ್ಮಾವರ- ಜನ್ನಾಡಿ ಹಾಗೂ   ಕೋಟ ಗೋಳಿಯಂಗಡಿ   ಜಿಲ್ಲಾ  ಮುಖ್ಯ  ರಸ್ತೆಯಲ್ಲಿ 20ಮೆಟ್ರಿಕ್‌  ಟನ್‌ಗಿಂತ   ಅಧಿಕ ಭಾರದ  ವಾಹನಗಳ  ಓಡಾಟವನ್ನು  ಲೋಕೋಪಯೋಗಿ  ಇಲಾಖೆ ನಿರ್ಬಂಧಿಸಿದೆ.  ಶಿರಿಯಾರ,  ಬ್ರಹ್ಮಾವರ ಮುಂತಾದ  ಕಡೆಗಳಲ್ಲಿ ಈ  ಕುರಿತು ಸೂಚನಾಫಲಕವನ್ನು  ಅಳವಡಿಸಿದೆ. ಆದರೆ ವಾಹನಗಳು ಈ  ಆದೇಶವನ್ನು ಲೆಕ್ಕಿಸದೆ  40- 45 ಟನ್‌ ಗಿಂತ ಹೆಚ್ಚು  ಭಾರದ  ಸರಕುಗಳನ್ನು ಇಲ್ಲಿ ಸಾಗಾಟ  ನಡೆಸುತ್ತದೆ. ಆದರೆ ಇದನ್ನು ತಡೆಯಲು  ಆರ್‌.ಟಿ.ಒ. ಅಥವಾ ಪೊಲೀಸ್‌ ಇಲಾಖೆಯಾಗಲಿ ಮುಂದಾಗಿಲ್ಲ.


20 ಮೆಟ್ರಿಕ್‌ ಟನ್‌ಗಿಂತ ಅಧಿಕ ಭಾರದ ವಾಹನಗಳ ಓಡಾಟವನ್ನು ನಿರ್ಬಂಧಿಸಿ ಲೋಕೋಪಯೋಗಿ ಇಲಾಖೆ ಸೂಚನಾ ಫಲಕ ಅಳವಡಿಸಿರುವುದು.

ಎಚ್ಚರವಹಿಸದಿದ್ದರೆ  
ಅಪಾಯ ಗ್ಯಾರಂಟಿ 

ಕೋಟ-ಗೋಳಿಯಂಗಡಿ ರಸ್ತೆ ಈ ಭಾಗದ  ಜನರ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು,  ಸಾವಿರಾರು   ವಿದ್ಯಾರ್ಥಿಗಳು, ಸಾರ್ವಜನಿಕರು ಇಲ್ಲಿ ಪ್ರತಿ ನಿತ್ಯ ಸಂಚರಿಸುತ್ತಾರೆ.  ಅದೇ ರೀತಿ  ಬ್ರಹ್ಮಾವರ ಜನ್ನಾಡಿ  ರಸ್ತೆಯ ಮೂಲಕವು ಸಾವಿರಾರು ಮಂದಿ ಸಂಚರಿಸುತ್ತಾರೆ. ಹಿಂದೊಮ್ಮೆ  ಬಾಕೂìರು  ಸೇತುವೆ ಕುಸಿದ ಸಂದರ್ಭ ಈ ಭಾಗದ ಸಂಪರ್ಕ  ಸಂಪೂರ್ಣವಾಗಿ ಕಡಿತಗೊಂಡಿತ್ತು. ಇದೀಗ ಅಧಿಕ  ಭಾರದ  ವಾಹನಗಳ ಓಡಾಟದಿಂದ ಅಪಾಯದಲ್ಲಿರುವ ಸೇತುವೆ, ಕಿರು ಸೇತುವೆ,  ಮೋರಿಗಳು ಕುಸಿದಲ್ಲಿ ಈ ಭಾಗದ ಜನರು  ಮತ್ತೂಮ್ಮೆ ಸಂಕಷ್ಟಪಡಬೇಕಾಗುತ್ತದೆ.
ಒಟ್ಟಾರೆ ಈ  ಕುರಿತು ಸೂಕ್ತ  ಕ್ರಮ ಕೈಗೊಂಡು ಮುಂದೆ ಎದುರಾಗಲಿರುವ ಅಪಾಯವನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಕೋಟ, ಬ್ರಹ್ಮಾವರದಲ್ಲಿ  ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ತಪಾಸಣೆ ನಡೆಸಿ ಕಾನೂನು ಮೀರುವ ವಾಹನಗಳ ಮೇಲೆ  ಕ್ರಮಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ  ಆಗ್ರಹವಾಗಿದೆ.

ಬೃಹತ್‌ ಗಾತ್ರದ‌ ಬಂಡೆಗಳ ಸಾಗಾಟ
ಕಡಲ್ಕೊರೆತಕ್ಕೆ ತಡೆಗೋಡೆ ನಿರ್ಮಿಸುವ ಸಲುವಾಗಿ ಉಪಯೋಗಿಸುವ 40-45  ಟನ್‌ ತೂಕದ  ಬಂಡೆಕಲ್ಲುಗಳನ್ನು ಕೋಟ -ಗೋಳಿಯಂಗಡಿ  ರಸ್ತೆಯಲ್ಲಿ ಸಾಗಾಟ ನಡೆಸಲಾಗುತ್ತದೆ ಹಾಗೂ  ನವಯುಗ  ಕಂಪನಿಯ ವಾಹನಗಳು ಕೂಡ ಅಧಿಕ ಭಾರದ ಸರಕುಗಳನ್ನು ಸಾಗಾಟ ನಡೆಸುತ್ತದೆ.

ಕುಸಿಯುವ  ಭೀತಿಯಲ್ಲಿ ಸೇತುವೆಗಳು 
ಈ  ರೀತಿಯ ವಾಹನಗಳ ಓಡಾಟದಿಂದ ಇಲ್ಲಿನ ಸೇತುವೆ, ಮೋರಿಗಳು ಕುಸಿಯುವ ಅಪಾಯದಲ್ಲಿದೆ. ಜೂ.8ರಂದು ಕೋಟ ಮೂರುಕೈ ಸಮೀಪ ಬೆಟ್ಲಕ್ಕಿ ಹಡೋಲಿನಲ್ಲಿ ಕಿರುಸೇತುವೆಯೊಂದು ಕುಸಿದು ಎರಡು ದಿನ ಸಂಪರ್ಕ ಕಡಿತಗೊಂಡು ಈ ಭಾಗದ ಜನತೆ ಪರದಾಟನಡೆಸಿದ್ದರು. ಇದೀಗ ತಾತ್ಕಾಲಿಕ ಮೋರಿ ಅಳವಡಿಸಿ ಸಂಪರ್ಕಕ್ಕೆ ವ್ಯವಸ್ಥೆ  ಮಾಡಲಾಗಿದ್ದು, ಇದರ ಮೇಲೂ ಅತೀ  ಭಾರದ ವಾಹನಗಳು ಓಡಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ಬ್ರಹ್ಮಾವರ -ಜನ್ನಾಡಿ  ಹಾಗೂ ಕೋಟ-ಗೋಳಿಯಂಗಡಿ  ರಸ್ತೆಯಲ್ಲಿ  ಅಧಿಕ ಭಾರವನ್ನು ಹೊತ್ತು  ಓಡಾಡುವ ವಾಹನಗಳಿಂದಾಗಿ ಇಲ್ಲಿನ ಸೇತುವೆಗಳು ಕುಸಿಯುವ ಹಂತ ತಲುಪಿದೆ. ಒಂದು ವೇಳೆ ಸೇತುವೆಗಳು ಕುಸಿದಲ್ಲಿ ಸಂಪರ್ಕವೇ ಕಡಿತಗೊಳ್ಳಲಿದೆ. ಈ ಕುರಿತು  ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದೆ.  ಆದರೆ ಇದರಿಂದ  ಹೆಚ್ಚಿನ ಪ್ರಯೋಜನವಾಗಲಿಲ್ಲ. ಸಂಬಂಧಪಟ್ಟ  ಅಧಿಕಾರಿಗಳು ಈ ಕುರಿತು
ಸೂಕ್ತ  ಕ್ರಮಕೈಗೊಳ್ಳಬೇಕು.

– ಯಡ್ತಾಡಿ ಸತೀಶ್‌  ಶೆಟ್ಟಿ, ಸಾಮಾಜಿಕ ಹೋರಾಟಗಾರರು

ಕೋಟ ಹಾಗೂ ಬ್ರಹ್ಮಾವರ ಜಿಲ್ಲಾ ಮುಖ್ಯ ರಸ್ತೆಯಲ್ಲಿ  ವಾಹನಗಳು ಅಧಿಕ ಭಾರವನ್ನು ಹೊತ್ತು ಸರಕುಗಳನ್ನು ಸಾಗಾಟ ಮಾಡುತ್ತಿರುವ ಕುರಿತು ಸ್ಥಳೀಯರಿಂದ  ದೂರುಗಳು ಬಂದಿದೆ. ಮುಂದಿನ  ದಿನದಲ್ಲಿ ಈ ಕುರತು
ಸೂಕ್ತ ಕ್ರಮಕೈಗೊಳ್ಳಲಾಗುವುದು.

– ಗುರುಮೂರ್ತಿ ಕುಲಕರ್ಣಿ, ಉಪಸಾರಿಗೆ ಆಯುಕ್ತರು ಉಡುಪಿ ಜಿಲ್ಲೆ

– ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next