Advertisement

ರೈತ ಸಂಘದಿಂದ ನಾಳೆ ರಸ್ತೆ ತಡೆ

10:27 AM Jul 05, 2020 | Suhan S |

ದಾವಣಗೆರೆ: ತಾಲೂಕಿನ ಎಚ್‌. ಕಲ್ಪನಹಳ್ಳಿ, ಹೊನ್ನೂರು ಗೊಲ್ಲರಹಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಜು. 6 ರಂದು ಜನ ಮತ್ತು ಜಾನುವಾರುಗಳೊಂದಿಗೆ ರಸ್ತೆ ತಡೆ ನಡೆಸಲಾಗುವುದು ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ ತಿಳಿಸಿದ್ದಾರೆ.

Advertisement

ಎಚ್‌. ಕಲ್ಪನಹಳ್ಳಿ, ಹೊನ್ನೂರು ಗೊಲ್ಲರಹಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಹಲವಾರು ಬಾರಿ ರಸ್ತೆ ತಡೆ, ಹೋರಾಟ ನಡೆಸಿದ ಸಂದರ್ಭದಲ್ಲಿ ಸೇತುವೆ ನಿರ್ಮಾಣದ ಭರವಸೆ ನೀಡಿದ್ದ ಅಧಿಕಾರಿಗಳು ಈಗ ಹಣದ ಕೊರತೆ ನೆಪದಲ್ಲಿ ಸೇತುವೆ ನಿರ್ಮಾಣ ಸಾಧ್ಯ ಇಲ್ಲ ಎಂದು ಹೇಳುತ್ತಿದ್ದಾರೆ. ಎರಡು ದಿನಗಳಲ್ಲಿ ಸೇತುವೆ ಕಾಮಗಾರಿ ಪ್ರಾರಂಭಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಸೋಮವಾರದ ವೇಳೆಗೆ ಕಾಮಗಾರಿ ಪ್ರಾರಂಭವಾಗದಿದ್ದಲ್ಲಿ ಅನಿವಾರ್ಯವಾಗಿ ರಸ್ತೆ ತಡೆ ನಡೆಸಲಾಗುವುದು. ಆಗ ಆಗುವಂತಹ ಎಲ್ಲ ರೀತಿಯ ಅನಾಹುತಕ್ಕೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಸಂಬಂಧಿತ ಅಧಿಕಾರಿ ವರ್ಗವೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಎಚ್‌. ಕಲ್ಪನಹಳ್ಳಿ ಗ್ರಾಮವೇ ಇಬ್ಭಾಗವಾಗಿದೆ.

ಒಂದು ಕಡೆ ಶಾಲೆ, ಪಶು ಆಸ್ಪತ್ರೆ, ದೇವಸ್ಥಾನಗಳಿವೆ. ಒಂದು ಕಡೆಯಿಂದ ಮತ್ತೂಂದು ಕಡೆಗೆ ಹೋಗಲಿಕ್ಕೆ ಅವಕಾಶವೇ ಇಲ್ಲ. 2 ಕಿಲೋಮೀಟರ್‌ ದೂರದವರೆಗೆ ಹೋಗಿ ಗ್ರಾಮದ ಮತ್ತೂಂದು ಕಡೆಗೆ ಬರಬೇಕಾಗುತ್ತದೆ. ಅಷ್ಟೊಂದು ಅವೈಜ್ಞಾನಿಕವಾದ ಕೆಲಸ ಮಾಡಲಾಗಿದೆ. ಕೆಳ ಸೇತುವೆ ಮಾಡಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆ ಸೇತುವೆ ಮಾಡಿರುವುದು ರೈತರು, ಜನ ಅನುಕೂಲಕ್ಕೆ ಅಲ್ಲ, ಉದ್ಯಮಿಗಳು, ಜನಪ್ರತಿನಿಧಿಗಳ ಅನುಕೂಲಕ್ಕಾಗಿ ಎಂದು ದೂರಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಸಮುದ್ರ ಶೇಖರ ನಾಯ್ಕ ಮಾತನಾಡಿ, ಎಚ್‌. ಕಲ್ಪನಹಳ್ಳಿ, ಹೊನ್ನೂರು ಗೊಲ್ಲರಹಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಹೋರಾಟ ನಡೆಸಿದಾಗ ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಅವರೇ ಕಾಮಗಾರಿ ಅವೈಜ್ಞಾನಿಕವಾಗಿದೆ. ಸೇತುವೆ ನಿರ್ಮಾಣ ಮಾಡಿಕೊಡಲಾಗುವುದು ಎಂಬ ಭರವಸೆ ನೀಡಿದ್ದರು. ಅದರಂತೆ ಸೇತುವೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು

Advertisement

Udayavani is now on Telegram. Click here to join our channel and stay updated with the latest news.

Next