ಚನ್ನರಾಯಪಟ್ಟಣ: ಹೇಮಾವತಿ ನಾಲೆ ಏರಿ ಮೇಲೆ ಕಟ್ಟಡ ತ್ಯಾಜ್ಯ ವಿಲೇವಾರಿ ಎಂಬ ಶೀರ್ಷಿಕೆ ಅಡಿಯಲ್ಲಿ “ಉದಯವಾಣಿ’ ಪತ್ರಿಕೆಯು ವಿಶೇಷ ವರದಿ ಮಾಡುವ ಮೂಲಕ ಪುರಸಭೆ ಹಾಗೂ ನೀರಾವರಿ ಇಲಾಖೆ ಗಮನಕ್ಕೆ ತದಿಂದ್ದರಿಂದ ಈಗ ಉತ್ತಮ ರಸ್ತೆ ನಿರ್ಮಾಣವಾಗಿದೆ.
ಪಟ್ಟಣದಲ್ಲಿ ಮನೆ ತೆರವೂ ಮಣ್ಣು, ಇಟ್ಟಿಗೆ ಚೂರು, ಮನೆ ಮೇಲ್ಛಾವಣೆ ಚೂರು ಸೇರಿದಂತೆ ಇತರ ಅನುಪಯುಕ್ತ ವಸ್ತುಗಳನ್ನು ಹೇಮಾವತಿ ನಾಲೆ ಏರಿ ಸುರಿಯುತ್ತಿದ್ದರಿಂದ ನಾಲೆ ನೀರು ಕಲುಷಿತವಾಗುತ್ತಿವುದನ್ನು ಹಾಗೂ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ವಿಶೇಷ ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು, ಹೇಮಾವತಿ ಎಡದಂಡೆ ನಾಲೆಯ ಮೇಲೆ ಗುಣಮಟ್ಟದ ಡಾಂಬರು ರಸ್ತೆ ನಿರ್ಮಾಣ ಮಾಡಿದ್ದಾರೆ.
ಹೇಮಾವತಿ ನಾಲೆ ಏರಿ ಸುಮಾರು 30 ಅಡಿ ಅಗಲದ ರಸ್ತೆಯಿದೆ. ಬಿಎಂ ರಸ್ತೆಯಿಂದ ಎಡ ಭಾಗದಲ್ಲಿನ ನಾಗಸಮುದ್ರ ಗ್ರಾಮಕ್ಕೆ ಹಾಗೂ ಬಲಭಾಗದಲ್ಲಿನ ಕಲಸಿಂದ, ಬೆಲಸಿಂದ, ಚಿಕ್ಕೇನಹಳ್ಳಿ ಸೇರಿದಂತೆ ವಿವಿಧ ಗ್ರಾಮ ಇದೇ ರಸ್ತೆಯಲ್ಲಿ ತೆರಳುತ್ತಾರೆ. ಇದಲ್ಲದೆ ಈ ಎಲ್ಲಾ ಗ್ರಾಮದ ಕೃಷಿ ಭೂಮಿಗೆ ಇದೇ ಹಾದಿಯಲ್ಲಿ ಎತ್ತಿನ ಬಂದಿ, ಟ್ರ್ಯಾಕ್ಟರ್ ಸೇರಿದಂತೆ ಎಲ್ಲಾ ವಾನಹಗಳು ಸಂಚಾರ ಮಾಡುತ್ತವೆ ಇದರಿಂದ ಮುಂದೆ ಆಗಬಹುದಾದ ತೊಂದರೆ ತಪ್ಪಿಸುವ ಉದ್ದೇಶದಿಂದ ಉದಯವಾಣಿ ವರದಿ ಪ್ರಕಟಿಸಿತ್ತು.
ರಸ್ತೆ ನಿರ್ಮಾಣವಾಗಿದೆ, ಕಸ ಎಸೆಯದಂತೆ ಜಾಗ್ರತೆ ವಹಿಸಲಿ: ದೇಶದಲ್ಲಿ ಕೇಂದ್ರ ಸರ್ಕಾರ ಸ್ವಚ್ಚ ಭಾರತ್ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದೆ ಆದರೆ ಪಟ್ಟಣದಲ್ಲಿನ ಹಣವಂತರು ಮಾತ್ರ ತಮ್ಮನ್ನು ಹೇಳುವ ಕೇಳುವವರಿಲ್ಲ ಎಂದು ತಮ್ಮ ಮನೆ ತ್ಯಾಜ್ಯವನ್ನು ಗ್ರಾಮೀಣ ಭಾಗದ ಜನರು ಸಂಚಾರ ಮಾಡುವ ನಾಲೆ ಏರಿ ಮೇಲಿನ ರಸ್ತೆಗೆ ಸುರಿಯುತ್ತಿದ್ದರು ಈಗ ನಾಲೆ ಏರಿ ಮೇಲೆ ಉತ್ತಮ ರಸ್ತೆ ನಿರ್ಮಾಣ ಆಗಿದೆ ಇಲ್ಲಿ ಪುನಃ ಕಸ ಸುರಿಯದಂತೆ ಪುರಸಭೆ ಹಾಗೂ ನೀರಾವರಿ ಇಲಾಖೆ ಸಿಬ್ಬಂದಿ ನೋಡಿಕೊಳ್ಳುವುದರೊಂದಿಗೆ ಸಾರ್ವಜನಿಕರು ಸಹಃ ರಸ್ತೆ ಬದಿ ಕಸ ಸುರಿಯುವುದ ನಿಲ್ಲಸಬೇಕಿದೆ.