Advertisement

ಅಂತ್ಯಕ್ರಿಯೆ ಮುಗಿಸಿ ಬರುವಾಗ ಭೀಕರ ಅಪಘಾತ: 11 ಜನ ಸಾವು, 6 ಮಂದಿ ಆಸ್ಪತ್ರೆಗೆ ದಾಖಲು

08:38 PM Feb 09, 2021 | Team Udayavani |

ಉತ್ತರ ಪ್ರದೇಶ: ಅಂತ್ಯಕ್ರಿಯೆಗೆಂದು ತೆರಳಿ  ವಾಪಸ್ಸಾಗುತ್ತಿದ್ದ ವೇಳೆ ಜೀಪ್ ಒಂದಕ್ಕೆ ಟ್ರಕ್ ವಾಹನ ಢಿಕ್ಕಿ ಹೊಡೆದ ಪರಿಣಾಮ 6 ಮಂದಿ ಸ್ಥಳದಲ್ಲಿಯೇ ಮೃತ ಪಟ್ಟು 11 ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿ- ಜೌನ್ ಪುರ ಹೆದ್ದಾರಿಯ ಜಲಾಲ್ ಪುರ ಬಳಿ ನಡೆದಿದೆ.

Advertisement

ಸಾವಿಗೀಡಾದವರನ್ನು ಅಮರ್ ಬಹದ್ದೂರ್ ಯಾದವ್(58), ರಾಮ್ ಸಿಂಗಾರ್ ಯಾದವ್ (38) ಕಮಲಾ ಪ್ರಸಾದ್ ಯಾದವ್ (60) ರಾಜ್ ಕುಮಾರ್(65), ಮುನ್ನಿಲಾಲ್ (38) ಹಾಗೂ ಇಂದ್ರಜಿತ್ ಯಾದವ್(48) ಎಂದು ಗುರುತಿಸಲಾಗಿದೆ. . ಇನ್ನು  ಗಾಯಗೊಂಡವರನ್ನು ಸ್ಥಳೀಯ  ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಕೂಡಾ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಮದ್ಯ ಖಜಾನೆ ಧಣಿ,ಮನೆಯನ್ನೇ ಕಚೇರಿ ಮಾಡಿದ್ದ BBMP ಅಧಿಕಾರಿ ದೇವೇಂದ್ರಪ್ಪ ಸೇವೆಯಿಂದ ಅಮಾನತು!

ಏನಿದು ಘಟನೆ?
ಜಲಾಲ್ ಪುರ ನಿವಾಸಿಯಾದ ದಾಂಡೇ ದೇವಿ (112) ಅವರು ಮೃತಪಟ್ಟಿದ್ದರು. ಇವರ  ಅಂತ್ಯ ಕ್ರಿಯೆಯನ್ನು ನೆರವೇರಿಸಲು  ಅಳಿಯ ಲಕ್ಷ್ಮೀ ಶಂಕರ್ ಯಾದವ್ ರನ್ನು ಒಳಗೊಂಡಂತೆ 17 ಜನರು  ವಾರಣಾಸಿಯ ಮಣಿಕರ್ಣಿಕಾ ಘಾಟ್ ಗೆ ತೆರಳಿದ್ದರು. ಅಲ್ಲಿಂದ ವಾಪಾಸ್ಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಘಟನೆ ನಡೆದ ತಕ್ಷಣ ಸ್ಥಳೀಯ ಪೋಲಿಸರು  ಸ್ಥಳಕ್ಕೆ ಭೇಟಿ ನೀಡಿದ್ದರು. ಆದರೆ ಅಷ್ಟರಲ್ಲೇ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next