Advertisement

ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು: ಯುವಕ ಸಾವು, ನಾಲ್ವರಿಗೆ ಗಾಯ

10:06 AM Dec 25, 2019 | sudhir |

ಚಿಕ್ಕಬಳ್ಳಾಪುರ : ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಯುವಕನೋರ್ವ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ರೀಯ ಹೆದ್ದಾರಿ-7ರ ವರ್‍ಲಕೊಂಡ ಗ್ರಾಮದ ಬಳಿ ಮಂಗಳವಾರ ನಡೆದಿದೆ.

Advertisement

ಮೃತ ಯುವಕನನ್ನು ಬಾಗೇಪಲ್ಲಿ ಪಟ್ಟಣದ ಮಹಮದ್ ತೋಹಿದ್ (18) ಎಂದು ತಿಳಿದು ಬಂದಿದೆ, ಮಂಗಳವಾರ ಚಿಕ್ಕಬಳ್ಳಾಪುರದಲ್ಲಿ ಎನ್.ಆರ್.ಸಿ ಮತ್ತು ಸಿ.ಎ.ಎ ವಿರೋಧಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಿ ಮತ್ತೆ ಬಾಗೇಪಲ್ಲಿಗೆ ವಾಪಸ್ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆ ಮಧ್ಯದಲ್ಲಿರುವ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿ, ಸ್ಥಳದಲ್ಲೆ ಯುವಕ ಸಾವನ್ನಪ್ಪಿದ್ದು ಕಾರಿನಲ್ಲಿದ್ದ ತನ್ನ ತಂದೆ ಮಹಮದ್ ಖದೀರ್ ಮತ್ತು ಮಹಮ್ಮದ್ ಶಮಿವುಲ್ಲಾ, ಮಹಮ್ಮದ್ ಇದಾಯಿತ್ ವುಲ್ಲಾ ಮತ್ತು ರಿಜ್ವಾನ್‌ಗೆ ಸಣ್ಣ ಪುಟ್ಟ ಗಾಯಾಲುಗಳಾಗಿದ್ದು, ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಗುಡಿಬಂಡೆ ಪೊಲೀಸ್ ಪೊಲೀಸರು ಅಪಘಾತ ಸ್ಥಳಕ್ಕೆ ಬಂದು ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next