ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಭಾಗಕ್ಕೆ ಸೇರಿದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬಸ್ ನಲ್ಲಿದ್ದ 10 ಕ್ಕೂ ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರು – ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 7 ದೇವನಹಳ್ಳಿಯ ಟೋಲ್ ಸಮೀಪ ಮಂಗಳವಾರ ಬೆಳಗ್ಗೆ ನಡೆದಿದೆ.
ಚಿಕ್ಕಬಳ್ಳಾಪುರದಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಬೆಂಗಳೂರಿಗೆ ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿದೆ, ಬಸ್ ಚಾಲಕ ಸೇರಿ ಹತ್ತು ಮಂದಿ ಪ್ರಯಾಣಿಕರಿಗೆ ಗಂಬೀರ ಗಾಯಗಳಾಗಿದ್ದು, ಅವರನ್ನು ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ರವಾನಿಸಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ರಸ್ತೆ ಬದಿ ಗಿಡಗಳಿಗೆ ನೀರು ಹಾಯಿಸುತ್ತಿದ್ದ ಟ್ಯಾಂಕರ್ ಚಾಲನೆಯಲ್ಲಿದ್ದು ಇದನ್ನು ಗಮನಿಸದ ಬಸ್ ಚಾಲಕ ಅತಿವೇಗದಿಂದ ಬಂದ ಕಾರಣ ಅಪಘಾತ ಸಂಭವಿಸಿದೆಯೆಂದು ಪ್ರತ್ಯಕ್ಷದರ್ಶಿಗಳು ಉದಯವಾಣಿಗೆ ತಿಳಿಸಿದ್ದಾರೆ.
ಸುಮಾರು 15 ಮೀಟರ್ ನಷ್ಟು ದೂರ ರಸ್ತೆ ವಿಭಜಕಕ್ಕೆ ಹಾಕಿದ್ದ ಮಿಡಿಯನ್ ಗೆ ಊಜ್ಜಿಕೊಂಡು ಬಸ್ ಹೋಗಿದೆ. ಬಸ್ ನ ಮುಂಭಾಗ ಬಹುತೇಕ ಜಖಂಗೊಂಡಿದೆ. ಆದರೆ ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣ ಅಪಾಯದಿಂದ ಪರಾಗಿದ್ದಾರೆ