Advertisement

ಸಾರಿಗೆ ಬಸ್ ಮತ್ತು ಲಾರಿ ಮುಖಾಮುಖಿ ಢಿಕ್ಕಿ: ಹಲವರಿಗೆ ಗಾಯ

10:11 AM Feb 14, 2020 | keerthan |

ಯಾದಗಿರಿ: ಶಹಾಪುರದಿಂದ ಕಲಬುರಗಿಗೆ ಹೊರಟಿದ್ದ ಬಸ್ ಮತ್ತು ರಾಜಸ್ಥಾನ ಮೂಲದ ಲಾರಿ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿ ಹಲವರು ಗಾಯಗೊಂಡ ಘಟನೆ ಗುರುವಾರ ನಡೆದಿದೆ.

Advertisement

ಶಹಾಪೂರ ತಾಲೂಕಿನ ಭೀಮರಾಯನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಸಾರಿಗೆ ಬಸ್ ಚಾಲಕರ ನಿರ್ಲಕ್ಷ್ಯ ದಿಂದ ಘಟನೆ ಜರುಗಿದೆ ಎನ್ನಲಾಗಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next