Advertisement

Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು

03:03 AM Sep 22, 2024 | Team Udayavani |

ಉಳ್ಳಾಲ: ಸೌದಿ ಅರೇಬಿಯಾದ ದಮಾಮ್‌ ಬಳಿ ಶುಕ್ರವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಉಳ್ಳಾಲ ನಿವಾಸಿಯಾಗಿದ್ದ ತಾಯಿ ಹಾಗೂ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಹೈದರ್‌ಉಳ್ಳಾಲ್‌ ಅವರ ಪುತ್ರಿ ಸಫಾ ಫಾತಿಮಾ (30) ಹಾಗೂ ಆಕೆಯ ಎರಡೂವರೆ ವರ್ಷದ ಮಗ ಲಯನ್‌ ಮೃತರು.

Advertisement

ಮದೀನದಿಂದ ಕಾರಿನಲ್ಲಿ ಸಫಾ ಅವರು ಪತಿ ಮಲಪುರಂ ಆರಿ ಕೋಡ್‌ ಸ್ವದೇಶಿ ಸುಹೈಲ್‌ (35) ಮತ್ತು ಸಹೋದರ ಮುಹವಿಯ (23) ಜತೆಗೆ ದಮಾವåನಲ್ಲಿ ರುವ ಹೈದರ್‌ ಅವರ ಮನೆಗೆ ತೆರಳುತ್ತಿ ದ್ದರು. ಕಾರು ಚಲಾಯಿಸುತ್ತಿದ್ದ ಮುಹವಿಯ ನಿದ್ದೆಗೆ ಜಾರಿದ್ದೇ ಅಪಘಾತಕ್ಕೆ ಕಾರಣ. ಸುಹೈಲ್‌, ಮಕ್ಕಳಾದ ಅಬ್ದುಲ್‌ ಮಲಿಕ್‌ (7), ಅಬ್ದುಲ್‌ ರಹಿಮಾನ್‌ (6), ಅಹ್ಮದ್‌ (5), ಮುಹವಿಯ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next