ಚೆನ್ನೈ: ರೇಷ್ಮೆ ಸೀರೆ ನೇಯ್ಗೆಯಲ್ಲಿ ಖ್ಯಾತಿ ಪಡೆದ ಆರ್‌ಎಂಕೆವಿ, ಸಸ್ಟೈನಬಲ್ ದಿನದಂದು ಏರ್ಪಡಿಸಿದ್ದ ಲ್ಯಾಕ್ಮೆ ಫ್ಯಾಷನ್ ವೀಕ್-2018ರಲ್ಲಿ ತಮ್ಮ ರಿವರ್ಸಿಬಲ್ ಕೈಮಗ್ಗದ ಸೀರೆಯ ಪ್ರಥಮ ಪ್ರದರ್ಶನ ಆಯೋಜಿಸುವ ಮೂಲಕ ಫ್ಯಾಷನ್ ಲೋಕಕ್ಕೆ ಕಾಲಿಟ್ಟಿದೆ.
ಪ್ರದರ್ಶನದಲ್ಲಿ ಪೇಟೆಂಟೆಡ್ ನೇಯ್ಗೆ ವಿಧಾನದಲ್ಲಿ ತಯಾರಾದ ಗ್ರಾಂಡ್ರಿ ವರ್ಸಿಬಲ್ ಕೈಮಗ್ಗದ ಸೀರೆಯನ್ನು ವಿಶ್ವ ಸುಂದರಿ ಖ್ಯಾತಿ ಸುಶ್ಮಿತಾ ಸೇನ್ ಧರಿಸಿ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ. ಶಿವಕುಮಾರ್ ಮಾತನಾಡಿ, ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ನಮ್ಮ ಹೊಸ ಕಲೆಕ್ಷನ್ ಗಳನ್ನು ಪ್ರದರ್ಶಿಸಲು ಹೆಮ್ಮೆ ಎನಿಸುತ್ತದೆ. ಸಾಂಪ್ರದಾಯಿಕ ಹಾಗೂ ಸಮಕಾಲೀನ
ವಸ್ತ್ರಧಾರಣೆಯ ಸಂಕೇತವಾದ ಬಟ್ಟೆಗಳ ಕಲೆಕ್ಷನ್ ಅನ್ನು ಸೃಷ್ಟಿಸಲು ಕೂಡ ಶ್ರಮಿಸುತ್ತಿದ್ದೇವೆ.
ಇಂದು ನಮ್ಮ ವಸ್ತ್ರಗಳ ಬ್ರ್ಯಾಂಡ್ ರಾಯಭಾರಿಯಾಗಿ ಹಾಗೂ ಮಹಿಳೆಯರಿಗೆ ಸ್ಫೂರ್ತಿದಾಯಕವಾಗಿ ಸುಶ್ಮಿತಾ ಸೇನ್ ಅವರನ್ನು ಆಯ್ಕೆ ಮಾಡಿರುವುದು ಸೂಕ್ತವೆನಿಸುತ್ತದೆ. ನಾಲ್ಕು ವಿಧದಲ್ಲಿ ಧರಿಸಬಹುದಾದ ನಮ್ಮ ಗ್ರಾಂಡ್ಡ್ ರಿವರ್ಸಿಬಲ್ ಸೀರೆಯಲ್ಲಿ 4 ಅದ್ಭುತ ಪಲ್ಲುಗಳು, 4 ಮ್ಯಾಚಿಂಗ್ ಬಾರ್ಡರ್‌ಗಳು ಹಾಗೂ 2 ವಿಭಿನ್ನ ಬಾಡಿಗಳಿರುತ್ತವೆ. ಹೆರಿಟೇಜ್ ಲೇಬಲ್‌ನ ನೇಯ್ಗೆಯ ವಿಧಾನವನ್ನು ಬಳಸಿ ಒಂದೇ ಸೀರೆಯಲ್ಲಿ ಎರಡು ವೈವಿಧ್ಯಗಳಿರು ವಂತೆ ತಯಾರಿಸಲಾಗಿದೆ ಎಂದರು.
ಸುಶ್ಮಿತಾ ಸೇನ್ ಅವರು ಮಾತನಾಡಿ, ಸುಂದರವಾದ ರೇಷ್ಮೆ ಸೀರೆಗಳಿಗೆ ಹೆಸರಾದ ಆರ್‌ಎಂಕೆವಿಯವರಿಗಾಗಿ ರ್‍ಯಾಂಪ್‌ನಲ್ಲಿ ನಡೆಯಲು ನನಗೆ ಹೆಮ್ಮೆ ಎನಿಸಿದೆ. ಹಳೆಯ ಕಲಾತ್ಮಕತೆಯೊಂದಿಗೆ ಸಸ್ಟೈನಬಲ್ ವಸ್ತ್ರಗಳು ಹಾಗೂ ಡೈಗಳನ್ನು ಬಳಸಿದ ಕಲೆಕ್ಷನ್ ಜೊತೆ ವಿವಿಧ ಬಗೆಯ ವಸ್ತ್ರಗಳನ್ನು ಅವರು ರೂಪಿಸಿದ್ದಾರೆ. ಪೇಟೆಂಟೆಡ್ ತಂತ್ರಜ್ಞಾನ ಬಳಸಿ ಕೈಮಗ್ಗಗಳಲ್ಲಿ ನೇಯ್ದ ಹೊಳೆಯುವ ವಿಭಿನ್ನ ರಿವರ್ಸಿಬಲ್ ಸೀರೆ ಧರಿಸಿರುವುದು ಖುಷಿ ಕೊಟ್ಟಿದೆ ಎಂದು ನುಡಿದರು.