ಹೊಸದಿಲ್ಲಿ : ಹಿರಿಯ ನಾಗರಿಕರು ತಮಗೆ ಕೊಡಲಾಗಿರುವ ರಿಯಾಯಿತಿ ಪ್ರಯಾಣ ದರ ಸೌಲಭ್ಯವನ್ನು ಭಾರತೀಯ ರೈಲ್ವೆಯ ಉದ್ಧಾರಕ್ಕಾಗಿ ಬಿಟ್ಟುಕೊಡಬೇಕೆಂಬ “‘Give it up’ ಯೋಜನೆಗೆ ಸಿಕ್ಕಿರುವ ಅದ್ಭುತ ಬೆಂಬಲದಿಂದ ಪ್ರೇರಿತವಾಗಿರುವ ರೈಲ್ವೇ ಇಲಾಖೆ ಈಗಿನ್ನು ತನ್ನ ರಿಯಾಯಿತಿ ಸೌಕರ್ಯವನ್ನು ಪಡೆಯುತ್ತಿರುವ ಇತರೇ ವರ್ಗದ ಪ್ರಯಾಣಿಕರಿಗೂ ಈ ಕರೆಯನ್ನು ವಿಸ್ತರಿಸಲು ಮುಂದಾಗಿದೆ.
ಶೇ.50ರ ಪ್ರಯಾಣ ದರ ರಿಯಾಯಿತಿ ಸೌಕರ್ಯವನ್ನು ಸುಮಾರು 90 ಲಕ್ಷ ಹಿರಿಯ ನಾಗರಿಕರು ಬಿಟ್ಟು ಕೊಟ್ಟ ಪರಿಣಾಮವಾಗಿ ರೈಲ್ವೇಗೆ 2017ರ ಜುಲೈ 22ರಿಂದ 2018ರ ಮಾರ್ಚ್ 31ರ ವರೆಗಿನ ಅವಧಿಯಲ್ಲಿ 32 ಕೋಟಿ ರೂ.ಗಳಿಗೂ ಅಧಿಕ ಮೊತ್ತ ಉಳಿತಾಯವಾಗಿದೆ.
ಭಾರತೀಯ ರೈಲ್ವೆ ಇಲಾಖೆ ವಿಶಿಷ್ಟ ವರ್ಗಗಳ ಪ್ರಯಾಣಿಕರಿಗೆ ನೀಡುವ ಟಿಕೆಟ್ ದರ ರಿಯಾಯಿತಿ ಸೌಕರ್ಯದಿಂದಾಗಿ 33,000 ಕೋಟಿ ರೂ.ಗಳ ಸಹಾಯಧನ ಹೊರೆಯನ್ನು ಹೊರುತ್ತಿದೆ.