Advertisement

ಗಣೇಶ ಪ್ರತಿಷ್ಠಾಪನೆಗೆ ನಿಬಂಧನೆ ವಿಧಿಸಿಲ್ಲ: ದತ್ತಾ

07:35 AM Aug 13, 2017 | Team Udayavani |

ಬೆಂಗಳೂರು: ಗಣೇಶ ಚತುರ್ಥಿ ಅಂಗವಾಗಿ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆಯಿಂದ ಬಾಂಡ್‌ ಠೇವಣಿ ಸೇರಿ ಯಾವುದೇ ನಿಬಂಧನೆಗಳನ್ನು ವಿಧಿಸಿಲ್ಲ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಆರ್‌. ಕೆ.ದತ್ತಾ ಸ್ಪಷ್ಟಪಡಿಸಿದ್ದಾರೆ.

Advertisement

ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆಗಳಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡಲು 10 ಲಕ್ಷ ರೂ. ಬಾಂಡ್‌ ಇಡಬೇಕು, ಇಂತಿಷ್ಟೇ ಎತ್ತರ ಇರಬೇಕು. ಇದೇ ಸ್ಥಳದಲ್ಲಿಡಬೇಕು, ಇಂತಿಷ್ಟು ಮಯದೊಳಗೆ ವಿಸರ್ಜಿಸಬೇಕು. ಇಂತಹುದೇ ಬಣ್ಣ ಬಳಸಬೇಕು, ಮೆರವಣಿಗೆಯಲ್ಲಿ ಸಿಡಿ ಮದ್ದು ಸಿಡಿಸಬಾರದು, ಬಣ್ಣ ಎರಚಬಾರದು, ಡಿಜೆ ಬಳಸಬಾರದು ಎಂಬ ನಿಬಂಧನೆಗಳನ್ನು ಪೊಲೀಸ್‌ ಇಲಾಖೆ ವಿಧಿಸಿದೆ ಎಂದು ಹಿಂದೂ ಸಂಘಟನೆಯೊಂದು ಆರೋಪಿಸುತ್ತಿದೆ. ಆದರೆ, ವಾಸ್ತವವಾಗಿ ಅಂತಹ ಯಾವ ನಿಬಂಧನೆಗಳನ್ನೂ ವಿಧಿಸಿಲ್ಲ.

ಇದೊಂದು ವದಂತಿ. ಇದಕ್ಕೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಅವರು ಹೇಳಿದರು. ಪೊಲೀಸ್‌ ಇಲಾಖೆ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ. ಹಿಂದು ಧರ್ಮದ ವಿರೋಧಿಯಾಗಿದೆ ಎಂದು ಸಂಘಟನೆ ಗಂಭೀರ ಆರೋಪ ಮಾಡುತ್ತಿದೆ. ಪೊಲೀಸ್‌ ಇಲಾಖೆಗೆ ರಾಜಕೀಯ ಪಕ್ಷಗಳ ಪರ ಕೆಲಸ ಮಾಡುವ ಅಗತ್ಯವಿಲ್ಲ  ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ಒದಗಿಸುವುದೇ ಇಲಾಖೆಯ ಮುಖ್ಯ ಉದ್ದೇಶ. ಗಣೇಶ್‌ ಹಬ್ಬದ ವೇಳೆ ಬಂದೋಬಸ್ತ್ ಕೈಗೊಳ್ಳುವುದು ಆಯಾ ಎಸ್‌ಪಿ ಹಾಗೂ ನಗರ ಪೊಲೀಸ್‌ ಆಯುಕ್ತರಿಗೆ ಬಿಟ್ಟಿದ್ದು. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಅಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ.

ಹಬ್ಬಕ್ಕೂ ಮೊದಲು ಶಾಂತಿ ಸಭೆ ನಡೆಸಬೇಕು ಸೇರಿ ಕೆಲ ಸೂಚನೆಗಳನ್ನು ಪಾಲಿಸುವಂತೆ ಆದೇಶಿಸಲಾಗಿದೆ
ಎಂದು ತಿಳಿಸಿದರು.

ಪೊಲೀಸರ ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪವಾಗಿಲ್ಲ. ಎಲ್ಲ ವರ್ಗಾವಣೆ ಪ್ರಕ್ರಿಯೆಯನ್ನು ಪೊಲೀಸ್‌ ಎಸ್ಟಾಬ್ಲಿಷ್‌ಮೆಂಟ್‌
ಬೋರ್ಡ್‌ ಮೂಲಕವೇ ಮಾಡಲಾಗಿದೆ. ಇದೊಂದು ಸಾಮಾನ್ಯ ಪ್ರಕ್ರಿಯೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

ಸ್ವಾತಂತ್ಯೊತ್ಸವಕ್ಕೆ ಭಾರೀ ಭದ್ರತೆ: ಆ.15ರ ಸ್ವಾತಂತ್ರೊéàತ್ಸವ ದಿನಾಚರಣೆಗೆ ಎಲ್ಲೆಡೆ ಬಿಗಿ ಬಂದೋಬಸ್ತ್
ಮಾಡಲಾಗಿದೆ. ವಿಶೇಷವಾಗಿ ಯಾವುದೇ ಕಟ್ಟೆಚ್ಚರ ವಹಿಸುವಂತೆ ಸೂಚನೆಗಳು ಬಂದಿಲ್ಲ. ಎಂದಿನಂತೆ ಸೂಕ್ತ ಭದ್ರತೆ ವಹಿಸುವಂತೆ ಆಯಾ ಜಿಲ್ಲಾ ಎಸ್ಪಿ ಮತ್ತು ನಗರ ಪೊಲೀಸ್‌ ಆಯುಕ್ತರಿಗೆ ಸೂಚಿಸಲಾಗಿದೆ ಎಂದರು.

ಗಣೇಶ ವಿಗ್ರಹ ಪ್ರತಿಷ್ಠಾಪನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಿಬಿಟ್ಟಿರುವ ವ್ಯಕ್ತಿಗಳು ಕೂಡಲೇ ತಮ್ಮ ದುಷ್ಕೃತ್ಯವನ್ನು ನಿಲ್ಲಿಸದಿದ್ದರೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ.
– ಆರ್‌.ಕೆ.ದತ್ತಾ, ಡಿಜಿಪಿ

Advertisement

Udayavani is now on Telegram. Click here to join our channel and stay updated with the latest news.

Next