Advertisement

“ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶದವರೆಗೂ ಹರಿಯುತ್ತಿರುವ ಕನ್ನಡದ ಕಂಪು ‘

11:34 PM May 06, 2019 | Team Udayavani |

ಕಾಪು : ಶತಮಾನೋತ್ತರ ಇತಿಹಾಸ ಹೊಂದಿದ್ದು, ಕನ್ನಡ ನಾಡು ನುಡಿಯ ಬಗ್ಗೆ ಜಾಗƒತವಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ನೆಲದ ಭಾಷೆ, ಸಂಸ್ಕೃತಿ ಮತ್ತು ಜನಪದಗಳ ರಕ್ಷಣೆಗೆ ವಿಶೇಷವಾಗಿ ದುಡಿಯುತ್ತಿದೆ. ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.

Advertisement

ಕಾಪು ತಾ| ಕನ್ನಡ ಸಾಹಿತ್ಯ ಪರಿಷತ್‌ನ ಆಶ್ರಯದಲ್ಲಿ ಕಾಪು ರೋಟರಿ ಶತಾಬ್ಧಿ ಭವನದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್‌ನ 105ನೇ ಸಂಸ್ಥಾಪನಾ ದಿನಾಚರಣೆ, ಕಾದಂಬರಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗರ – ಕೇಂದ್ರ ಮಟ್ಟದಿಂದ ಗ್ರಾಮೀಣ ಪ್ರದೇಶದವರೆಗೂ ವಿಸ್ತಾರಗೊಂಡು ಕನ್ನಡದ ಕಾರ್ಯ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್‌ ಕಳೆದ 3 ವರ್ಷದ ಅವ ಧಿಯಲ್ಲಿ ದಾಖಲೆಯ 500ಕ್ಕೂ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ ಎಂದರು.

ಮಂಗಳೂರು ಗಣಪತಿ ಪ. ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲೆ, ಹಿರಿಯ ಸಾಹಿತಿ ಚಂದ್ರಕಲಾ ನಂದಾವರ ಅವರು ಹಿರಿಯ ಮುಸ್ಲಿಂ ಮಹಿಳಾ ಸಾಹಿತಿ ಮುಮ್ತಾಜ್‌ ಬೇಗಂ ಬೆಳಪು ಅವರ ಸ್ವಾತಂತ್ರÂದ ಕಹಳೆ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿ, ನಮ್ಮನ್ನು ಒಡೆದು ಆಳುವ ನೀತಿ ಅನುಸರಿಸಿ ಕೋಮು ಸಾಮರಸ್ಯ ನಾಶಪಡಿಸಿದ ಪೋರ್ಚುಗೀಸರ ದಬ್ಟಾಳಿಕೆ ಮತ್ತು ಆಕ್ರಮಣಕಾರಿ ನೀತಿ ದಿಟ್ಟವಾಗಿ ಎದುರಿಸಿ, ನಾಡಿನ ರಕ್ಷಣೆಗಾಗಿ ಹೋರಾಡಿದ ದಿಟ್ಟ ಮಹಿಳೆ ರಾಣಿ ಅಬ್ಬಕ್ಕರ ಸಾಧನೆಯನ್ನು ಜನರಿಗೆ ತಿಳಿಸುವ ಉದ್ದೇಶ ಕಾದಂಬರಿಕಾರರದ್ದಾಗಿದೆ. ಇದು ವಿವಿಧ ಭಾಷೆಗಳಿಗೆ ಅನುವಾದವಾಗುವಂತಾಗಲಿ ಎಂದರು.

ಕಾದಂಬರಿಯ ಬಗ್ಗೆ ವಿಮರ್ಶೆ ನಡೆಸಿದ ಮಂಗಳೂರು ವಿ.ವಿ.ಯ ಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಮಾತನಾಡಿ, ಮಮ್ತಾಜ್‌ ಅವರ ತಂದೆ ದೇಶ ರಕ್ಷಕ ಯೋಧ ಹಾಗೂ ತಾಯಿ ಶಿಕ್ಷಕಿಯಾಗಿದ್ದು ಅವರೀರ್ವರ ಪ್ರಭಾವದಲ್ಲಿ ಬೆಳೆದ ಇವರು ಇತಿಹಾಸದ ಎಲ್ಲ ಅಂಶಗಳನ್ನು ಅಧ್ಯಯನ ನಡೆಸಿ, ಇತಿಹಾಸದಲ್ಲಿ ಬರುವ ಮೂರು ಅಬ್ಬಕ್ಕನವರ ಬಗ್ಗೆ ಗಮನಹರಿಸಿದ್ದಾರೆ. ಅಬ್ಬಕ್ಕನ ಸರಳತೆ, ಮಾತೃವಾತ್ಸಲ್ಯ, ಮುಗ್ಧತೆ, ಪೋರ್ಚುಗೀಸರ ವಿರುದ್ಧ ಹೋರಾಡಿ ಗೆದ್ದ ಮಹಿಳೆಯ ಶೌರ್ಯದ ಬಗ್ಗೆ ಹೆಮ್ಮೆ ಪಡುವಂತಿದೆ. ಇತಿಹಾಸಕ್ಕೆ ಹತ್ತಿರ ಇರುವಂತೆ ರಚನೆಗೊಂಡ ಕಾಂದಂಬರಿ ಉತ್ತಮವಾಗಿ ಮೂಡಿಬಂದಿದೆ ಎಂದರು.

Advertisement

ಕಾಪು ತಾ| ಕನ್ನಡ ಸಾಹಿತ್ಯ ಪರಿಷತ್‌ ಘಟಕದ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಜಿಲ್ಲಾ ಸಂಘಟನ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ, ಹಿರಿಯ ಸಾಹಿತಿಗಳು, ರೋಟರಿ ಸದಸ್ಯರು, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.

ಕಾಪು ತಾ| ಕಸಾಪ ಗೌರವ ಕಾರ್ಯದರ್ಶಿ ವಿದ್ಯಾಧರ್‌ ಪುರಾಣಿಕ್‌ ಸ್ವಾಗತಿಸಿದರು. ನವ್ಯತಾ – ನಮ್ರತಾ ನಾಡಗೀತೆ ಹಾಡಿದರು. ಸಮಿತಿ ಸದಸ್ಯ ಹರೀಶ್‌ ಕಟಪಾಡಿ ವಂದಿಸಿದರು. ಗೌರವ ಕಾರ್ಯದರ್ಶಿ ವಿದ್ಯಾ ಅಮ್ಮಣ್ಣಾಯ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next