Advertisement
ಗುರುವಾಯನಕೆರೆ ಭರ್ತಿಗುರುವಾಯನಕೆರೆ ಸಂಪೂರ್ಣ ತುಂಬಿದೆ. ಮುಂದೆ ಜೋರಾಗಿ ಮಳೆ ಬಂದಲ್ಲಿ ರಸ್ತೆಗೂ ನೀರು ಹರಿಯುವ ಸಾಧ್ಯತೆಯಿದೆ. ಪಕ್ಕದಲ್ಲಿ ಮನೆಗಳಿದ್ದು, ಹಾನಿಯಾಗುವ ಭೀತಿ ಇದೆ. ತಾಲೂಕಿನ ಪ್ರಮುಖ ನದಿಯಾದ ನೇತ್ರಾವತಿಯೂ ಉಕ್ಕಿ ಹರಿಯುತ್ತಿದ್ದು, ಕಾಜೂರು ಕೊಲ್ಲಿ ಬಳಿ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಕೊಲ್ಲಿ – ಕಾಜೂರು ನಡುವೆ ವಾಹನಗಳ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಜನತೆ ಇದರಿಂದ ಸುತ್ತಿ ಬಳಸಿ ಸಾಗುವಂತಾಗಿದೆ. ನಿಡಿಗಲ್ ಬಳಿಯೂ ನೇತ್ರಾವದಿ ನದಿ ತುಂಬಿ ಹರಿಯುತ್ತಿದೆ. ಧರ್ಮಸ್ಥಳ ಬಳಿಯೂ ನದಿ ತುಂಬಿ ಹರಿಯುತ್ತಿದ್ದು, ಧರ್ಮಸ್ಥಳ ಬಳಿ ಹಾಕಿರುವ ಅಣೆಕಟ್ಟನ್ನು ಹಾದು ಉಕ್ಕಿ ಮೇಲೆ ಹರಿಯುತ್ತಿದೆ. ಸ್ನಾನ ಘಟ್ಟದ ಬಳಿ ಸಾರ್ವನಿಕರು ದಡದಲ್ಲೇ ಸ್ನಾನ ಮಾಡುವಂತಾಗಿದೆ.
ಈ ನಡುವೆ ಚಾರ್ಮಾಡಿ ಘಾಟಿಯ ಅಣ್ಣಪ್ಪ ಬೆಟ್ಟದ ಬಳಿ ಅಪಾಯಕಾರಿ ರೀತಿಯಲ್ಲಿ ನೀರು ಹರಿಯುತ್ತಿದೆ ಎಂಬ ವೀಡಿಯೋ ವೈರಲ್ ಆಗಿದೆ. ಆದರೆ ಇದು ಚಾರ್ಮಾಡಿಯದಲ್ಲ, ಬೇರೆ ಜಾಗದ ವೀಡಿಯೋ ಎಂಬ ಸಂಗತಿ ಬೆಳಕಿಗೆ ಬಂದಿದೆ.