Advertisement

ನದಿ, ಸಾಗರಗಳು ಪ್ಲಾಸ್ಟಿಕ್‌ ಮಯ

11:40 AM May 28, 2019 | Suhan S |

ರಾಮನಗರ: ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್‌ನ್ನು ಬಳಸುತ್ತಿರುವುದರಿಂದ ಇಂದು, ನದಿ ಸಾಗರಳು ಪ್ಲಾಸ್ಟಿಕ್‌ ಕಸದಿಂದ ತುಂಬಿ ಹೋಗಿದೆ ಎಂದು ಸಾಲು ಮರದ ತಿಮ್ಮಕ್ಕ ಆತಂಕ ವ್ಯಕ್ತಪಡಿಸಿದರು.

Advertisement

ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಎಬಿಸಿಡಿ ಡ್ಯಾನ್ಸ್‌ ಅಕಾಡೆಮಿ ಹಮಿಕೊಂಡಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಕೃತಿ ಮುನಿದರೆ, ಮಾನವ ಅಸಹಾಯಕ: ಪ್ಲಾಸ್ಟಿಕ್‌ ಹಾಳೆ, ಚೀಲಗಳನ್ನು ಯಥೇಚ್ಛವಾಗಿ ಬಳಸುತ್ತಿದ್ದೇವೆ. ಪ್ಲಾಸ್ಟಿಕ್‌ ಅನ್ನು ಎಲ್ಲೆಂದರಲ್ಲಿ ಬೀಸಾಡುತ್ತಿದ್ದಾರೆ. ರಸ್ತೆ ಬದಿಯಲ್ಲಿ ಬಿದ್ದಿರುವ ಆಹಾರ ತಿನ್ನುವ ಹಸು ಸೇರಿದಂತೆ ಬೀಡಾಡಿ ಪ್ರಾಣಿಗಳು ಪ್ಲಾಸ್ಟಿಕ್‌ ನುಂಗಿ ಅವುಗಳ ಪ್ರಾಣಕ್ಕೆ ಅಪಾಯವನ್ನು ತರುತ್ತಿದೆ. ಪ್ಲಾಸ್ಟಿಕ್‌ ಮಾಲಿನ್ಯ ವಿಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕುಡಿಯುವ ನೀರಿನ ಖಾಲಿ ಬಾಟಿಲಿಗಳು ಜಾಸ್ತಿ ಪ್ರಮಾಣದಲ್ಲಿ ಕಸವಾಗುತ್ತಿವೆ. ಮದುವೆ ಮುಂತಾದ ಸಮಾರಂಭಗಳಲ್ಲಿ ಅನುಕೂಲತೆ ಮತ್ತು ಆಡಂಬರದ ದೃಷ್ಟಿಯಿಂದ ಊಟದ ವೇಳೆ ಪ್ಲಾಸ್ಟಿಕ್‌ ಬಾಟಲಿಯ ಕುಡಿಯುವ ನೀರು, ಪ್ಲಾಸ್ಟಿಕ್‌ ಚಮಚ ನೀಡುವುದನ್ನು ನಿಲ್ಲಿಸಬೇಕು. ಪ್ಲಾಸ್ಟಿಕ್‌ ಆಡಂಬರವನ್ನು ನಿಲ್ಲಿಸಿ. ನಮ್ಮ ಸುತ್ತಮುತ್ತಲಿನ ಪರಿಸರ ಹಸಿರಾಗಿದ್ದರೆ ನಮ್ಮ ಬಾಳು ಚೆಂದವಾಗಿ ಇರತ್ತದೆ. ವಿಜ್ಞಾನ ಎಷ್ಟು ಬೆಳೆದರೇನು ? ಪ್ರಕೃತಿ ಮುನಿದರೆ, ಮಾನವ ಅಸಾಹಯಕ. ಪ್ರಕೃತಿ ವಿರುದ್ಧ ಕೆಲಸ ಮಾಡುವುದನ್ನು ತಕ್ಷಣ ನಿಲ್ಲಿಸಿ ಎಂದರು.

ನೃತ್ಯ ಸ್ಪರ್ಧೆಯನ್ನು ಉದ್ಘಾಟಿಸಿದ ಮೈಸೂರಿನ ಮ್ಯಾಜಿಕ್‌ ಸ್ಟೆಪ್ಸ್‌ ಡ್ಯಾನ್ಸ್‌ ಅಕಾಡೆಮಿಯ ಮಂಜುಳ ಹರೀಶ್‌ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಸ್ಪರ್ಧೆಗಳು ಮಕ್ಕಳಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಪ್ರಕೃತಿಗೆ ಹಾನಿಯಾಗದಂತಹ ಸುಸ್ಥಿರ ಪ್ರಗತಿ ಅಗತ್ಯ: ತಾಪಂ ಮಾಜಿ ಅಧ್ಯಕ್ಷ ಎಸ್‌.ಟಿ. ಕಾಂತರಾಜ್‌ ಪಟೇಲ್ ಮಾತನಾಡಿ, ಪರಿಸರ ಹಾಗೂ ಜೀವ ಸಂಕುಲದ ಬಗ್ಗೆ ನಾವು ಅಸೂಕ್ಷ್ಮರಾಗಿದ್ದೇವೆ. ಮನುಷ್ಯ ನಿರ್ಮಾಣ ಮಾಡಿದ್ದನ್ನು ಪರಿಸರ ಕೆಡವಿದರೆ, ಅದನ್ನು ವಿಧ್ವಂಸಕ ಎನ್ನುತ್ತೇವೆ. ಅದೇ ಮನುಷ್ಯ ಪ್ರಕೃತಿಯನ್ನು ನಾಶ ಮಾಡಿದರೆ ಅಭಿವೃದ್ಧಿ ಎಂಬ ಹೆಸರು ಕೊಡುತ್ತೇವೆ. ಪರಿಸರಕ್ಕೆ ಹಾನಿಯಾಗದಂತಹ ಸುಸ್ಥಿರ ಪ್ರಗತಿಯ ಬಗ್ಗೆ ಎಲ್ಲರೂ ಚಿಂತನೆ ಮಾಡಬೇಕು ಎಂದು ತಿಳಿಸಿದರು.

Advertisement

ಎಲ್ಲರೂ ಪರಿಸರದ ಬಗ್ಗೆ ಸಂವೇದನೆ ಬೆಳೆಸಿಕೊಳ್ಳಬೇಕು. ಮಕ್ಕಳು ಸಹಜವಾಗಿಯೇ ಪರಿಸರದ ಬಗ್ಗೆ ಪ್ರೀತಿ ಹೊಂದಿರುತ್ತಾರೆ. ಆದರೆ ಅವರನ್ನು ಪರಿಸರದಿಂದ ಬೇರೆ ಮಾಡಲಾಗುತ್ತಿದೆ. ಶಿಕ್ಷಣ ಪಡೆದ ಹಾಗೆ ಅವರು ನಿಸರ್ಗದಿಂದ ದೂರ ಆಗುತ್ತಿದ್ದಾರೆ. ಪರಿಸ್ಥಿತಿ ಬದಲಾವಣೆ ಆಗಬೇಕು. ಅದು ಮನೆಯಿಂದಲೇ ಆರಂಭವಾಗಬೇಕು ತಿಳಿಸಿದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ರಾಜಶೇಖರ್‌, ಸಾರ್ವಜನಿಕ ಪ್ರಮುಖ ರಾದ ಎಂ.ಜಿ.ಆರ್‌. ಮಣಿ, ಲಕ್ಷ್ಮಣ್‌, ಎನ್‌. ರಾಜು, ಎಂ.ವಿ. ನಾಗರಾಜ್‌, ಎಂ.ವಿ. ಪುಟ್ಟಸ್ವಾಮಿ, ದೇವರಾಜ್‌, ಕಲಾವಿದ ರಾದ ಮಂಜುನಾಥ್‌, ರಘುನಂದನ್‌, ಜಗದೀಶ್‌, ನಾಗೇಶ್‌, ಎಬಿಸಿಡಿ ಡ್ಯಾನ್ಸ್‌ ಅಕಾಡೆಮಿಯ ಎಸ್‌. ರೇಣುಕಾಪ್ರಸಾದ್‌, ಪರಮೇಶ್‌, ಸೋಮಪ್ರಭಸಿದ್ದೇಶ್‌, ಪ್ರಕಾಶ್‌, ಶಶಿಕಲಾರೇಣುಕಾಪ್ರಸಾದ್‌, ಲೀಡರ್ಸ್‌ ಅಕಾಡೆಮಿಯ ಸಿಂಧು ಉಪಸ್ಥಿತರಿದ್ದರು.

ಡ್ಯಾನ್ಸ್‌ ಸ್ಪರ್ಧೆಯಲ್ಲಿ ವಿಜೇತರು: ಜೂನಿಯರ್‌ ಸೋಲೊ ವಿಭಾಗ: ವರ್ಷ (ಮಂಡ್ಯ) ಪ್ರಥಮ, ಚಂದನ(ಚನ್ನಪಟ್ಟಣ) ದ್ವಿತೀಯ, ಬನ್ನಿ (ಬೆಂಗಳೂರು) ತೃತೀಯ. ಜೂನಿಯರ್‌ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಫೀಲ್ ದ ಬೆಸ್ಟ್‌ ಡಾನ್ಸ್‌ (ಬೆಂಗಳೂರು) ಪ್ರಥಮ, ವಿಸ್ಮಯ್‌ ಡ್ಯಾನ್ಸ್‌ (ಬೆಂಗಳೂರು) ದ್ವಿತೀಯ, ಆರ್‌ ಡಿಸಿ ಗುಂಪು (ಮಂಡ್ಯ) ತೃತೀಯ.

ಸೀನಿಯರ್‌ ಸೋಲೊ ವಿಭಾಗ: ಜನ್ಮ (ರಾಮನಗರ) ಪ್ರಥಮ, ಶಾಲಿನಿ (ರಾಮನಗರ) ದ್ವಿತೀಯ, ಭೂಮ್‌ ಬಾಯ್ಸ ಡ್ಯಾನ್ಸ್‌ (ಬೆಂಗಳೂರು) ತೃತೀಯ.

ಸೀನಿಯರ್‌ ಸಮೂಹ ನೃತ್ಯ ಸ್ಪರ್ಧೆ: ಅಂಚಿಸ್‌ ಡ್ಯಾನ್ಸ್‌ (ಬೆಂಗಳೂರು) ಪ್ರಥಮ, ಬಿಬಿಟಿ (ರಾಮನಗರ) ದ್ವಿತೀಯ, ಭೂಮ್‌ ಬಾಯ್ಸ ಡ್ಯಾನ್ಸ್‌ (ಬೆಂಗಳೂರು) ತೃತೀಯ.

ಭರತ ನಾಟ್ಯ ಸ್ಪರ್ಧೆ: ಕಿರಿಯರ ವಿಭಾಗ: ದೀಪು(ಬಿಡದಿ) ಪ್ರಥಮ, ನವ್ಯಶ್ರೀ (ರಾಮನಗರ) ದ್ವಿತೀಯ, ವರ್ಷಿಣಿ (ಚನ್ನಪಟ್ಟಣ) ತೃತೀಯ. ಕಿರಿಯರ ವಿಭಾಗದ ನೃತ್ಯ ಸ್ಪರ್ಧೆ: ಆದ್ಯವೀರ ಕಲಾ ಭವನ (ಚನ್ನಪಟ್ಟಣ) ಪ್ರಥಮ, ದೀಪು ಮತ್ತು ತಂಡ (ಬಿಡದಿ) ದ್ವಿತೀಯ, ಚಂದನ್‌ ಮತ್ತು ತಂಡ (ರಾಮನಗರ) ತೃತೀಯ.

ಹಿರಿಯರ ವಿಭಾಗ: ಆರ್‌ಡಿಸಿ(ಮಂಡ್ಯ) ಪ್ರಥಮ, ಜೀವಿತ (ಬೆಂಗ ಳೂರು) ದ್ವಿತೀಯ, ರಚನ (ಬೆಂಗಳೂರು) ತೃತೀಯ. ಹಿರಿಯರ ವಿಭಾಗದ ಸಮೂಹ ನೃತ್ಯ ಸ್ಪರ್ಧೆ: ಚಾರ್ವಿ ಮತ್ತು ತಂಡ (ಚನ್ನಪಟ್ಟಣ) ಪ್ರಥಮ, ಭಾರ್ಗವಿ ಮತ್ತು ತಂಡ (ರಾಮನಗರ) ದ್ವಿತೀಯ, ರಾಜೇಶ್‌ ತಂಡ (ಬೆಂಗಳೂರು) ತೃತೀಯ.

Advertisement

Udayavani is now on Telegram. Click here to join our channel and stay updated with the latest news.

Next