Advertisement
ಕೋಡಿಬೆಂಗ್ರೆ ಮೀನುಗಾರಿಕೆ ಜೆಟ್ಟಿ ಸಮೀಪದ, ಮಸೀದಿಯ ಎದುರುಗಡೆ ಸುವರ್ಣ ನದಿಯಲ್ಲಿ ಕೊರೆತ ಕಾಣಿಸಿ ಕೊಂಡಿದ್ದು ತೆರೆಗಳು ದಡವನ್ನು ಅಪ್ಪಳಿಸುತ್ತಿವೆೆ. ಸುಮಾರು 20ಅಡಿಗಳಷ್ಟು ಭೂ ಭಾಗವು ಕೊರೆತವಾಗಿದ್ದು, ಮರಮಟ್ಟುಗಳು ನದಿ ಪಾಲಾಗಿವೆೆ. ಸಮೀಪದ ಮನೆಗಳ ಬುಡದವರೆಗೂ ನದಿ ನೀರು ಮುನ್ನುಗ್ಗಿ ಬರುತ್ತಿದ್ದು, ಸುರೇಶ್ ಜಿ. ಕುಂದರ್, ಬೇಬಿ ತಿಂಗಳಾಯ, ದಿನೇಶ್ ಎಸ್. ಕೋಟ್ಯಾನ್, ಸುಶೀಲಾ ಖಾರ್ವಿ, ಚಿತ್ರಾ ಖಾರ್ವಿ ಅವರ ಮನೆಗಳು ಅಪಾಯದಲ್ಲಿವೆ.
Related Articles
Advertisement
ಮಳೆಗಾಲದಲ್ಲಿ ಇಲ್ಲಿ ಸಮುದ್ರದ ಏರಿಳಿತದ ಪ್ರಭಾವ ಇರುತ್ತದೆ. ಮೀನುಗಾರಿಕೆ ಬಂದರು ಸಮೀಪದ ಈ ನದಿಯಲ್ಲಿ ಈ ಬಾರಿ ಹೂಳೆತ್ತದಿರುವುದರಿಂದ ನದಿಯ ಆಳ ಕಡಿಮೆಯಾಗಿ ಮಳೆಗಾಲ ನದಿ ತುಂಬಿ ಹರಿದು ಕೊರೆತ ಕಾಣಿಸಿಕೊಳ್ಳಲು ಕಾರಣವಾಗಿದೆ ಎನ್ನಲಾಗುತ್ತಿದೆ.
ನದಿಯಲ್ಲಿ ಹೂಳು ತೆಗೆಯದ ಕಾರಣ ನದಿ ಆಳವಿಲ್ಲದೆ ತೆರೆಗಳು ದಂಡೆಗೆ ಅಪ್ಪಳಿಸುತ್ತಿವೆೆ. ಇದರಿಂದ 4-5 ಮನೆಗಳಿಗೆ ಸಮಸ್ಯೆ ಉಂಟಾಗಿದೆ. ಸುಮಾರು 150 ಮೀಟರ್ ತಡೆಗೋಡೆ ನಿರ್ಮಾಣ ಮಾಡುವಲ್ಲಿ ತುರ್ತು ಕ್ರಮ ತೆಗೆದುಕೊಳ್ಳಬೇಕು.