Advertisement
ಸೇತುವೆಯ ತಡೆಗೋಡೆಗಳು ಕಿತ್ತಿಹೋಗಿದ್ದು, ಕಬ್ಬಿಣದ ಸರಳುಗಳು ಕಾಣುತ್ತಿವೆ. ಈ ಸೇತುವೆ ಮೇಲೆ ಸಂಚರಿಸುವಾಗ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ನದಿ ಪಾಲು ಆಗುವುದು ಖಚಿತ. ಎರಡೂ ಸೇತುವೆಗಳನ್ನು ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಜಲದುರ್ಗ ಸೇತುವೆ ಸುಮಾರು ವರ್ಷಗಳ ಹಿಂದೆ ನಿರ್ಮಿಸಿದ್ದು, ನಿರ್ವಹಣೆ ಕೊರತೆಯಿಂದಾಗಿ ಶಿಥಿಲಾವಸ್ಥೆ ತಲುಪುತ್ತಿದೆ. ಇನ್ನು ಯಳಗುಂದಿ ಸೇತುವೆ ಇತ್ತೀಚಿನ ವರ್ಷಗಳಲ್ಲಿ ನಿರ್ಮಿಸಲಾಗಿದೆ.
Related Articles
Advertisement
ಜಲದುರ್ಗದಲ್ಲಿ ಐತಿಹಾಸಿಕ ಕೋಟೆ ಇರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಪ್ರವಾಸಿಗರು ಜಲದುರ್ಗ ಸೇತುವೆಯಲ್ಲೇ ಸಂಚರಿಸಬೇಕು. ವಾಹನ ದಟ್ಟಣೆ ಹೆಚ್ಚಿರುತ್ತದೆ. ತಡೆಗೋಡೆಯಿಲ್ಲದ ಸೇತುವೆ ಅನಾಹುತಕ್ಕೆ ಕಾದು ಕುಳಿತಂತಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೇತುವೆಗಳ ದುರಸ್ತಿಗೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಯಳಗುಂದಿ, ಜಲದುರ್ಗ ಸೇತುವೆಗಳು ದುರಸ್ತಿಗಾಗಿ ಕಾದಿವೆ. ಸಂಬಂಧಪಟ್ಟ ಇಲಾಖೆಗಳು ನಿರ್ವಹಣೆ ಮಾಡಬೇಕಾಗಿತ್ತು.ಆದರೆ ಈವರೆಗೂ ಮಾಡುತ್ತಿಲ್ಲ, ಸೇತುವೆಗಳಲ್ಲಿ ಅಪಾಯ ಸಂಭವಿಸುವವರೆಗೂ ದುರಸ್ತಿಗೆ ಮುಂದಾಗುವಂತೆ ಕಾಣುತ್ತಿಲ್ಲ.
ಸಂಗಣ್ಣ ಹಾಲಭಾವಿ, ಜಲದುರ್ಗ ನಿವಾಸಿ