ಮುಧೋಳ: ಕರ್ನಾಟಕದ ಕೃಷ್ಣಾ, ಆಂಧ್ರದ ಗೋದಾವರಿ ನದಿಗಳ ರಾಷ್ಟ್ರೀಯ ನದಿ ಜೋಡಣೆ ಯೋಜನೆಗೆ ಕೇಂದ್ರ ಸರ್ಕಾರ ತಾತ್ವಿಕವಾಗಿ ಒಪ್ಪಿ ಯೋಜನೆ ಕೈಗೆತ್ತಿಕೊಂಡಿದೆ. ಆದರೆ ಈ ಯೋಜನೆಯಿಂದ ಕರ್ನಾಟಕಕ್ಕೆ ಭಾರೀ ಅನ್ಯಾಯವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಕಾಳಜಿ ವಹಿಸಿ ಕರ್ನಾಟಕಕ್ಕೆ ನ್ಯಾಯ ಒದಗಿಸಬೇಕೆಂದು ಉದ್ಯಮಿ ಹಾಗೂ ಕಾಳಿ ನದಿ ಜೋಡಣೆ ವರದಿ ರೂವಾರಿ ಸಂಗಮೇಶ ನಿರಾಣಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಗೋದಾವರಿ ಪಾತ್ರದಿಂದ ನೀರನ್ನು ಕೃಷ್ಣಾ ಕಣಿವೆಗೆ ತಿರುಗಿಸುವ ಯೋಜನೆಯಲ್ಲಿ ಒಂದು ಹನಿ ನೀರೂ ರಾಜ್ಯಕ್ಕೆ ದೊರೆಯುವುದಿಲ್ಲ.
1980ರಲ್ಲಿ ಮಹಾನದಿ ಹಾಗೂ ಗೋದಾವರಿ ನದಿ ಪಾತ್ರದಿಂದ ಕರ್ನಾಟಕಕ್ಕೆ 283 ಟಿಎಂಸಿ ನೀರು ಹಂಚಿಕೆಯಾಗಿತ್ತು. ಇದನ್ನು 2000ರಲ್ಲಿ ಮರುಪರಿಶೀಲನೆ ಮಾಡಿ ಈ ಪ್ರಮಾಣವನ್ನು 164 ಟಿಎಂಸಿಗೆ ತಗ್ಗಿಸಲಾಯಿತು.
ಇನ್ನೂ ನೋವಿನ ಸಂಗತಿಯೆಂದರೆ, 2010ರಲ್ಲಿ ನಡೆದ ತೃತೀಯ ಪರಿಕರಣೆಯಲ್ಲಿ ಕರ್ನಾಟಕದ ಹಕ್ಕಿನ ಪಾಲನ್ನು ಸಂಪೂರ್ಣವಾಗಿ ರದ್ದು ಮಾಡಲಾಯಿತು. ಈ ಬಗ್ಗೆ ರಾಜ್ಯದ ಜನತೆ, ಸರ್ಕಾರ ಹಾಗೂ ಸಂಸದರು ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ.