Advertisement
Related Articles
Advertisement
ಅಧ್ಯಕ್ಷತೆ ವಹಿಸಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಜೀವ ವೈವಿಧ್ಯತೆಯ ದಾಖಲೆಯನ್ನು ಸರಕಾರಕ್ಕೆ ಸಲ್ಲಿಸಬೇಕು. ಪ್ರತಿಯೊಂದು ಗ್ರಾಪಂಗಳಲ್ಲಿಯೂ ಸಮಿತಿ ಈ ಕುರಿತ ಕಾರ್ಯಕ್ಕೆ ಮುಂದಾಗಬೇಕು. ದೇವರ ಕಾಡುಗಳ ರಕ್ಷಣೆಯಾಗಬೇಕು. ಮನುಷ್ಯ ಎಷ್ಟು ಅಸಹಾಯಕ ಎನ್ನುವುದನ್ನು ಕೊರೊನಾ ತೋರಿಸಿಕೊಟ್ಟಿದೆ. ನಾವು ಪರಿಸರದ ಸಂರಕ್ಷಣೆ ಮಾಡಿ ಸಮತೋಲನ ಕಾಪಾಡಿಕೊಳ್ಳಬೇಕಾಗಿದೆ ಎಂದರು. ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಮುಂದಿನ ದಿನಗಳಲ್ಲಿ ಜೀವ ವೈವಿಧ್ಯತೆಯ ದಾಖಲಾತಿ ಕುರಿತಾಗಿ ಮತ್ತು ಸಂರಕ್ಷಣೆಗಾಗಿ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಕತ್ತಲೆ ಕಾನು ಮಾನ್ಯತೆ ಕಾಪಾಡಲು ಯೋಜನೆ ರೂಪಿಸಲಾಗಿದೆ ಎಂದರು.
ಪರಿಸರ ತಜ್ಞ ಬಾಲಚಂದ್ರ ಹೆಗಡೆ ಸಾಯಿಮನೆ ಹಾಗೂ ಕೊಳಲು ತಯಾರಕ ಮತ್ತು ಬಿದಿರು ಸಂರಕ್ಷಕ ಮಂಜುನಾಥ ಹೆಗಡೆ ನಟ್ಟಿಗಾರ ಅವರನ್ನು ಸನ್ಮಾನಿಸಲಾಯಿತು. ಡಿಎಫ್‌ಒ ಎಸ್.ಜಿ. ಹೆಗಡೆ, ತಹಶೀಲ್ದಾರ್ ಪ್ರಸಾದ ಎಸ್.ಎ, ತಾಪಂ ಇಒ ಪ್ರಶಾಂತ ರಾವ್, ಗ್ರಾಪಂ ಅಧ್ಯಕ್ಷೆ ಮಂಗಲಾ ಸುಧಾಕರ ಹೆಗಡೆ ಉಪಸ್ಥಿತರಿದ್ದರು.