Advertisement

ಸಾವಿರಾರು ಮಂದಿಯ ಸಾಮೂಹಿಕ ತಿಥಿ:ಗೋಸಾಯಿಘಾಟ್ ನಲ್ಲಿ ಸಿದ್ದತೆ ಗಳ ಪರಿಶೀಲನೆ

04:17 PM Oct 03, 2021 | Vishnudas Patil |

ಶ್ರೀರಂಗಪಟ್ಟಣ: ಗಂಜಾಂ ಕಾವೇರಿ‌ ನದಿ ತೀರದ ಗೋಸಾಯಿಘಾಟ್ ನಲ್ಲಿ ಸೋಮವಾರ ಅ.4 ರಂದು ಕೊರೊನಾದಿಂದ ಸಾವನ್ನಪ್ಪಿದ ಸಾವಿರಾರು ಮಂದಿಗೆ ಸಾಮೂಹಿಕ ತಿಥಿಕಾರ್ಯ ಏರ್ಪಡಿಸಲಾಗಿದೆ.

Advertisement

ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್. ಅಶೋಕ್ ,ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಂಜನಾಥ್ ಪ್ರಸಾದ್ ಮತ್ತು ರಾಜ್ಯಮಟ್ಟದ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.

ಕಾರ್ಯಕ್ರಮದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ.ಅಶ್ವಥಿ,ತಹಶೀಲ್ದಾರ್ ಶ್ವೇತಾ,ಡಾ ಭಾನುಪ್ರಕಾಶ್ ಶರ್ಮ ,ಬಿಜೆಪಿ ಮುಖಂಡ ಟಿ. ಶ್ರೀಧರ್ ಮತ್ತಿತರ ಪ್ರಮುಖರು ಗೋಸಾಯಿಘಾಟ್ ಗೆ ತೆರಳಿ ಸಿದ್ಧತೆ ಗಳ ಪರಿಶಿಲನೆ ನಡರಸಿದರು.

ಅಧಿಕಾರಿಗಳು ಕರ್ಮ ಹೋಮ ನಡೆಯುವ ಸ್ಥಳ , ಪೂಜಾ ಸ್ಥಳಗಳು, ಬಾಳೆ, ಮಾವಿನ ಹಸಿರು ತೋರಣ, ಮುಖ್ಯಸ್ಥರು ಕುಳಿತುಕೊಳ್ಳುವ ಸ್ಥಳ ಮತ್ತು ಶಾಮೀಯಾನ ಹಾಕಿರುವ ಬಗ್ಗೆ ಪರಿಶೀಲನೆ ನಡರಸಿದರು.

Advertisement

ಕಳೆದ ತಿಂಗಳು ಮಳವಳ್ಳಿಯ ಬೆಳಕವಾಡಿ ಶಿಂಷಾ ನದಿ ದಡದಲ್ಲಿ ಕೊರೊನಾದಿಂದ ಮೃತರಾದ ಅನಾಥ ವ್ಯಕ್ತಿಗಳ ಅಸ್ಥಿ ವಿಸರ್ಜನೆ ಯನ್ನು ಸರಕಾರವೇ ಕಂದಾಯ ಸಚಿವರ ನೇತೃತ್ವದಲ್ಲಿ ಮಾಡಿತ್ತು .ಆ 1200 ಮಂದಿಗೆ ಸೋಮವಾರ ಗೋಸಾಯಿಘಾಟ್ ನಲ್ಲಿ ಕರ್ಮ ಪುಣ್ಯಾಹಗಳನ್ನು ವೇದ ಬ್ರಹ್ಮ ಡಾ. ಭಾನುಪ್ರಕಾಶ್ ನೇತೃತ್ವದಲ್ಲಿ ಬೆಳಿಗ್ಗೆ 8 ಗಂಟೆಯಿಂದ ವಿವಧಿವಿಧಾನದ ಪೂಜೆಗಳಾದ ಮೋಕ್ಷ ನಾರಾಯಣ ಬಲಿ ,ಕರ್ಮವನ್ನು‌ಮಾಡಲಾಗುತ್ತದೆ.
ಪ್ರಾರಂಭದಲ್ಲಿ ಗಣಪತಿ ಪೂಜೆ ಪುಣ್ಯಾಹ, ಪಂಚಗವ್ಯ ಮತ್ತು ದ್ವಾರಸ ನಾರಾಯಣರ 12 ಕಳಸ ಪೂಜೆ, ಪ್ರಾಯಶ್ಚಿತ ತಿಲಹೋಮಗಳು ನಡೆಯುತ್ತದೆ ಪಂಚಗವ್ಯ ಪೂಜೆಮಾಡಿ ನಾಲ್ಕುವರೆ ಅಡಿ ಉದ್ದದ ವಿಷ್ಷ್ಣು ಪಾದವನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತದೆ.

ದಶಪಿಂಡ ಪ್ರದಾನ ವಿಧಾನಗಳು ನಂತರ 11 ನೇ ದಿನದ ರುದ್ರಪಾರಾಯಣ,ದಶದಾನ ಕಾರ್ಯಗಳನ್ನು ನಡೆಸಲಾಗುತ್ತದೆ. ಶ್ರೀರಂಗನ ದರ್ಶನ ಬಳಿಕ ಶಾಸ್ವತಿ ಧಾರ್ಮಿಕ ಕೇಂದ್ರದಲ್ಲಿ ಮೃತರಿಗೆ ಎಡೆ ಪೂಜೆ ಮಾಡಿ , ಪ್ರಸಾದ ಕೂಡ ನಡೆಯಲಿದೆ ಎಂದು ಡಾ. ಭಾನುಪ್ರಕಾಶ್ ಶರ್ಮ ತಿಳಿಸಿದ್ದಾರೆ.

ಪೊಲೀಸರು ಕಾರ್ಯಕ್ರಮ ನಡೆಯುವ ಸ್ಥಳ ಪ್ರವೇಶದ್ವಾರಗಳ ಬಳಿ ಭಿಗಿ ಭದ್ರತೆ ವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next