Advertisement

ಕೊಡಗಿನ ಬೆಡಗಿಯ ಜಬರ್ದಸ್ತ್ ಆ್ಯಕ್ಷನ್‌

10:45 AM Sep 11, 2021 | Team Udayavani |

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಆ್ಯಕ್ಷನ್‌ ಹೀರೋಯಿನ್ಸ್‌, ಫೀಮೇಲ್‌ ಆ್ಯಕ್ಷನ್‌ ಸಿನಿಮಾಗಳು ಬರುತ್ತಿಲ್ಲ ಎನ್ನುತ್ತಿದ್ದವರಿಗೆ ಇಲ್ಲೊಂದು ಗುಡ್‌ ನ್ಯೂಸ್‌ ಇದೆ. ರಿತನ್ಯಾ ಹೂವಣ್ಣ ಎಂಬ ಮಾಡೆಲಿಂಗ್‌ ಲೋಕದ ಪ್ರತಿಭೆ ಈಗ ಆ್ಯಕ್ಷನ್‌ ಹೀರೋಯಿನ್‌ ಆಗಿ, “ಮರ್ದಿನಿ’ ಸಿನಿಮಾದ ಮೂಲಕ ಸ್ಯಾಂಡಲ್‌ ವುಡ್‌ಗೆ ಪರಿಚಯವಾಗುತ್ತಿದ್ದಾರೆ.

Advertisement

ಹೌದು, ಕಳೆದ ಒಂದೂವರೆ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಆ್ಯಕ್ಷನ್‌ ಹೀರೋಯಿನ್‌ ಆಗಿ ಸಿನಿಪ್ರಿಯರ ಮುಂದೆಬಂದ ನಟಿಯರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಹೀಗಿರುವಾಗ ಸಹಜವಾಗಿಯೇ ಒಂದು ವರ್ಗದ ಆ್ಯಕ್ಷನ್‌ ಪ್ರಿಯ ಪ್ರೇಕ್ಷಕರು, ಹೊಸ ತಲೆಮಾರಿನ ಆ್ಯಕ್ಷನ್‌ ಹೀರೋಯಿನ್‌ಗಳ ಆಗಮನ ನಿರೀಕ್ಷೆಯಲ್ಲಿದ್ದಾರೆ. ಇಂಥ ಸಮಯದಲ್ಲಿ ರಿತನ್ಯಾ ಕನ್ನಡ ಚಿತ್ರರಂಗಕ್ಕೆ ಆ್ಯಕ್ಷನ್‌ ಹೀರೋಯಿನ್‌ ಆಗಿ ಪದಾರ್ಪಣೆ ಮಾಡುತ್ತಿದ್ದು, ಸಹಜವಾಗಿಯೇ “ಮರ್ದಿನಿ’ ಅವತಾರವೆತ್ತಿರುವ ರಿತನ್ಯಾ ಸಿನಿಮಾದ ಮೇಲೆ ನಿರೀಕ್ಷೆ, ಕುತೂಹಲಎರಡೂ ಹೆಚ್ಚಿದೆ.

ಇದನ್ನೂ ಓದಿ:ಸೆ.17ರಿಂದ ”ಜಿಗ್ರಿದೋಸ್ತ್” ಗಳ ಆಟ: ಸ್ನೇಹವೇ ಚಿತ್ರದ ಜೀವಾಳ

ಮಾಡೆಲಿಂಗ್‌ನಿಂದ ಚಿತ್ರರಂಗದತ್ತ “ಮರ್ದಿನಿ’ ಗೆಟಪ್‌ನಲ್ಲಿ ಸಿನಿಪ್ರಿಯರ ಮುಂದೆ ಬರುತ್ತಿರುವ ರಿತನ್ಯಾ ಹೂವಣ್ಣ ಮೂಲತಃ ಕೊಡಗಿನ ಬೆಡಗಿ. ಇಂಜಿನಿಯರಿಂಗ್‌ ಶಿಕ್ಷಣದ ಬಳಿಕ ಮಾಡೆಲಿಂಗ್‌ನತ್ತ ಮುಖ ಮಾಡಿದ ರಿತನ್ಯಾ, ಕಳೆದ ಕೆಲ ವರ್ಷಗಳಿಂದ ಮಾಡೆಲಿಂಗ್‌ ಲೋಕದಲ್ಲಿ ಸಕ್ರಿಯವಾಗಿರುವ ಹುಡುಗಿ. ಈಗಾಗಲೇ ಅನೇಕ ಜಾಹೀರಾತುಗಳು, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಕಿರುತೆರೆಯಲ್ಲಿ ಗುರುತಿಸಿಕೊಂಡ ರಿತನ್ಯಾ, ಈಗ “ಮರ್ದಿನಿ’ ಸಿನಿಮಾದ ಮೂಲಕ ಹಿರಿತೆರೆ ಪ್ರವೇಶಿಸುತ್ತಿದ್ದಾರೆ. ಚಿತ್ರದಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಿತನ್ಯಾ,ಖಡಕ್‌ಖಾಕಿ ತೊಟ್ಟು ತೆರೆಮೇಲೆ ಘರ್ಜಿಸಲಿದ್ದಾರೆ.

ಇತ್ತೀಚೆಗಷ್ಟೇ”ಮರ್ದಿನಿ’ ಚಿತ್ರದ ಫ‌ಸ್ಟ್‌ಲುಕ್‌ ಮತ್ತು ಟೀಸರ್‌ ಬಿಡುಗಡೆಯಾಗಿದ್ದು, ಮಾಸ್‌ ಸಿನಿಪ್ರಿಯರ ಗಮನ ಸೆಳೆಯುವಂತಿದೆ.ಈ ಮೂಲಕ ಕನ್ನಡಕ್ಕೊಬ್ಬಳು ಆ್ಯಕ್ಷನ್‌ ಹೀರೋಯಿನ್‌ ಸಿಗುವ ಭರವಸೆ ನೀಡುತ್ತಿದೆ ಚಿತ್ರತಂಡ.

Advertisement

“ಮರ್ದಿನಿ’ ಚಿತ್ರದಲ್ಲಿ ರಿತನ್ಯಾ ಜೊತೆಗೆ ಅಕ್ಷಯ್‌, ಮನೋಹರ್‌, ಮನಮೋಹನ ರಾಯ್‌, ಇಂಚರಾ, ಅನೂಪ್‌ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅಕ್ಷಯ್‌ ಕಥೆ, ಗಜೇಂದ್ರ ಸಂಭಾಷಣೆ ಬರೆದಿದ್ದಾರೆ.

ಅರುಣ್‌ ಸುರೇಶ್‌ ಛಾಯಾಗ್ರಹಣ, ವಿಶ್ವ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಹಿತನ್‌ ಹಾಸನ್‌ ಸಂಗೀತವಿದೆ.ಈ ಹಿಂದೆ “ದೇವ್ರಂಥ ಮನುಷ್ಯ’ ಸಿನಿಮಾ ನಿರ್ದೇಶಿಸಿದ್ದ ಕಿರಣ್‌ “ಮರ್ದಿನಿ’ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಗದೀಶ್‌ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಸದ್ಯ “ಮರ್ದಿನಿ’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರ ಸೆನ್ಸಾರ್‌ ಮುಂದಿದೆ.

 ಜಿ. ಎಸ್‌. ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next