Advertisement

ಖಾಸಗೀಕರಣದಿಂದ ದೇಶಕ್ಕೆ ಅಪಾಯ: ಬಾಲಕೃಷ್ಣ ಶೆಟ್ಟಿ

11:07 PM Oct 16, 2019 | Team Udayavani |

ಉಡುಪಿ: ಕೇಂದ್ರ ಸರಕಾರದ ಸಾರ್ವಜನಿಕ ವಲಯ ಖಾಸಗೀಕರಣ ನೀತಿಯಿಂದಾಗಿ ದೇಶಕ್ಕೆ ದೊಡ್ಡ ಅಪಾಯ ಎದುರಾಗಲಿದೆ ಎಂದು ಜಿಲ್ಲಾ ಸಿಪಿಐಎಂ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿದರು.

Advertisement

ಎಡಪಕ್ಷಗಳು ಕರೆ ನೀಡಿದ ಆರ್ಥಿಕ ಬಿಕ್ಕಟ್ಟು, ಜನ ಸಾಮಾನ್ಯರ ಸಂಕಷ್ಟಗಳ ವಿರುದ್ಧ ಪ್ರತಿಭಟನೆಯ ಭಾಗವಾಗಿ ಮಂಗಳವಾರ ಅಜ್ಜರಕಾಡು ಹುತಾತ್ಮ ಚೌಕದ ಬಳಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ದೇಶದ ಜನರ ಹಿತದೃಷ್ಟಿಯಿಂದ ಸಾರ್ವಜನಿಕ ವಲಯದ ಖಾಸಗೀಕರಣ ನಿಲ್ಲಿಸಬೇಕು. ರಕ್ಷಣೆ, ಕಲ್ಲಿದ್ದಲು ವಲಯದಲ್ಲಿ ಶೇ. 100 ನೇರ ಹೂಡಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ಬಿಎಸ್‌ಎನ್‌ಎಲ್‌, ಶಸ್ತ್ರಾಸ್ತ್ರ ಕಾರ್ಖಾನೆಗಳು, ಭಾರತೀಯ ರೈಲ್ವೇ, ಏರ್‌ ಇಂಡಿಯಾ ಸೇರಿದಂತೆ ಮೊದಲಾದ ಖಾಸಗೀಕರಣವನ್ನು ಕೂಡಲೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ಸಾರ್ವಜನಿಕ ವಲಯ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಮೂಲಕ ಉದ್ದಿಮೆದಾರರಿಗೆ ಲಾಭ ಮಾಡಿಕೊಡಲು ಸಹಕರಿಸಲಾಗುತ್ತಿದೆ. ಪಸ್ತುತ ದೇಶದಲ್ಲಿ ಶೇ. 41ರಷ್ಟು ಗ್ರಾಮೀಣ ಭಾಗದಲ್ಲಿ ಬ್ಯಾಂಕ್‌ ಶಾಖೆ ಹೊಂದಿಲ್ಲ. ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ ಹೊರತು ಬಡವರ್ಗ, ಸಾಮಾನ್ಯ ಜನರ ಆದಾಯ ಹೆಚ್ಚಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿಲ್ಲ ಎಂದರು.

ಬಿಎಸ್‌ಎನ್‌ಎಲ್‌ನ್ನು ಪುನಶ್ಚೇತನಗೊಳಿಸುವ ಅವಕಾಶವಿದ್ದರೂ ಸರಕಾರ ಮನಸ್ಸು ಮಾಡುತ್ತಿಲ್ಲ. ಬಿಎಸ್‌ಎನ್‌ಎಲ್‌ ಮುಚ್ಚಿದರೆ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವುದೆ ಸರಕಾರದ ಉದ್ದೇಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಸಿಪಿಐಎಂ ಮುಖಂಡರಾದ ಕೆ.ವಿ. ಭಟ್‌, ಶೇಖರ ಯು., ಕೆ. ಶಂಕರ್‌, ಸುರೇಶ ಕಲ್ಲಗಾರ, ಕವಿರಾಜ್‌, ಶಶಿಧರ ಗೊಲ್ಲ, ಎಚ್‌. ನರಸಿಂಹ ರಾಜು ಪಡುಕೋಣೆ, ಬಲ್ಕಿಸ್‌ ಕುಂದಾಪುರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next