ಕೈಕಂಬ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷತೆಗೆ ಹಾಗೂ ವೇಗ ತಡೆಗೆ ಬ್ಯಾರಿಕೇಡ್‌ಗಳನ್ನು ಇಡುವುದು ಸಾಮಾನ್ಯ. ಆದರೆ ಆ ಇಲ್ಲಿ ಬ್ಯಾರಿಕೇಡ್‌ಗಳೇ ಅಪಘಾತಕ್ಕೆ ಕಾರಣವಾಗುತ್ತಿದೆ.
ಗುರುಪುರ ಸೇತುವೆಯ ಸಮೀಪ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಂಗಳೂರು ನಗರ ಗ್ರಾಮಾಂತರ ಪೊಲೀಸ್ ಠಾಣಾವ್ಯಾಪ್ತಿಗೆ ಸಂಬಂಧಿಸಿದ ಗುರುಪುರ ಪರಾರಿಯಲ್ಲಿ ಬ್ಯಾರಿ ಕೇಡ್ ಕಾರಣದಿಂದಾಗಿ ಅವ ಘಡ ಉಂಟಾ ಗುತ್ತಿದೆ.
ಉಳಾಯಿಬೆಟ್ಟುವಿನಿಂದ ರಾಷ್ಟ್ರೀಯ ಹೆದ್ದಾರಿ 169ಗೆ ಸಂರ್ಪಕಿಸುವ ಗುರುಪುರ ಪರಾರಿಯಲ್ಲಿ ಮೂರು ಬ್ಯಾರಿಕೇಡ್‌ಗಳನ್ನು ಇಡಲಾಗಿದೆ. ಗುರುಪುರದಿಂದ ಮಂಗಳೂರಿಗೆ ಹೋಗುವಾಗ (ಉಳಾಯಿಬೆಟ್ಟು ರಸ್ತೆ ಕೂಡುವ ಪ್ರದೇಶ) ಎಡಬದಿಯಲ್ಲಿ ಹಾಗೂ ಬಲ ಬದಿಯಲ್ಲಿ ಒಂದು ಬ್ಯಾರಿಕೇಡ್‌ಗಳನ್ನು ಇಡಲಾಗಿದೆ.
ರಾತ್ರಿ ವೇಳೆ ಅಪಾಯವಾಗುವ
ಬ್ಯಾರಿಕೇಡ್‌ಗಳು
ಬ್ಯಾರಿಕೇಡ್‌ಗಳು ಹಳೆದಾಗಿದ್ದು ಅದರಲ್ಲಿ ಬಣ್ಣಗಳೇ ಕಾಣುತ್ತಿಲ್ಲ .ಬ್ಯಾರಿಕೇಡ್‌ಗೆ ಅತ್ತ ಇತ್ತ ಕಲ್ಲು ಇಟ್ಟು ನಿಲ್ಲಿಸಲಾಗಿದೆ.ಇದು ರಾತ್ರಿ ವೇಳೆ ಕಾಣಿಸದೇ ಇರುವುದು ಈ ಅಪಘಾತಗಳಿಗೆ ಕಾರಣವಾಗಿದೆ. ಎದುರಿನಿಂದ ಬಂದ ವಾಹನದ ಹೆಡ್‌ಲೈಟ್‌ಗಳಿಗೆ ಈ ಬ್ಯಾರಿಕೇಡ್‌ಗಳು ಕಾಣದೆ ಅಪಘಾತಗಳಿಗೆ ಕಾರಣವಾಗಿದೆ.
Related Articles
ತಿರುವಿನಿಂದ ಕೂಡಿದ ರಾಷ್ಟ್ರೀಯ ಹೆದ್ದಾರಿ
ವಾಮಂಜೂರಿನಿಂದ ಗುರುಪುರ ಪರಾರಿಗೆ ಬರುವಾಗ ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ತಿರುವಿನಿಂದ ಕೂಡಿದ್ದು ವಾಹನಗಳಿಗೆ ಈ ಬ್ಯಾರಿಕೇಡ್‌ಗಳು ಕಾಣಿಸದೇ ಇರುವುದು ಇನ್ನೊಂದು ಕಾರಣ ಎಂದು ಹೇಳಲಾಗುತ್ತಿದೆ.
ದಾರಿದೀಪ ಉರಿಯುತ್ತಿಲ್ಲ
ಈ ಪ್ರದೇಶದಲ್ಲಿ ದಾರಿದೀಪಗಳಿಲ್ಲದೇ ಬ್ಯಾರಿಕೇಡ್ ಕಾಣದೇ ಇರುವುದಕ್ಕೆ ಕಾರಣವಾಗಿದೆ. ಬ್ಯಾರಿಕೇಡ್‌ಗಳು ಬಣ್ಣವಿಲ್ಲದೇ ರಾತ್ರಿ ವೇಳೆಗೆ ಇದು ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಎಂದು ವಾಹನ ಸವಾರರು ಅಳಲು.ಬಣ್ಣ ಹಾಗೂ ಬ್ಲಿಂಕರ್ ಅಳವಡಿಸಬೇಕು ಬ್ಯಾರಿಕೇಡ್‌ಗಳಿಗೆ ಬಣ್ಣ ಬಳಿಯ ಬೇಕು. ಆಗ ಬ್ಯಾರಿಕೇಡ್‌ಗಳು ಕಾಣತ್ತದೆ. ಅದಕ್ಕೆ ಬ್ಲಿಂಕರ್ ದೀಪ ಹಾಗೂ ಹೆದ್ದಾರಿಗೂ ಬ್ಲಿಂಕರ್ ದೀಪದ ವ್ಯವಸ್ಥೆ ಮಾಡಬೇಕಾಗಿದೆ.
ದಾರಿದೀಪ ಅಳವಡಿಸಬೇಕು
ಗುರುಪುರ ಪರಾರಿಯಲ್ಲಿ ವಿದ್ಯುತ್ ಕಂಬಗಳಿಗೆ ದಾರಿದೀಪದ ವ್ಯವಸ್ಥೆಯಾಗಬೇಕು. ಅಲ್ಲಿ ದಾರಿದೀಪ ಉರಿಯದೇ ರಾತ್ರಿ ಕತ್ತಲು ಅವರಿಸುತ್ತಿದೆ. ವಾಹನ ಸವಾರರ, ಪಾದಚಾರಿಗಳ ಹಿತದೃಷ್ಟಿಯಿಂದ ಇಲ್ಲಿ ದಾರಿದೀಪ ಅಳವಡಿಸಬೇಕಾಗಿದೆ.