Advertisement

ಭಾರತದ ಮಿತ್ರರಿಗೆ ಸ್ಮಿತ್‌ ಧನ್ಯವಾದ

12:20 PM May 22, 2017 | |

ಹೈದರಾಬಾದ್ : ಆಸ್ಟ್ರೇ ಲಿಯದ ಬಹುತೇಕ ಕ್ರಿಕೆಟಿಗರಿಗೆ ಭಾರತವೆಂದರೆ ಎರಡನೇ ತವರುಮನೆ ಇದ್ದಂತೆ. ಇದಕ್ಕೆ ಐಪಿಎಲ್‌ ಸೇರಿದಂತೆ ಅನೇಕ ಇತರ ಕಾರಣಗಳೂ ಒಳ ಗೊಂಡಿವೆ. ಸ್ಟೀವ್‌ ವೋ, ಹೇಡನ್‌, ಪಾಂಟಿಂಗ್‌, ಬ್ರೆಟ್‌ ಲೀ, ಗಿಲ್‌ಕ್ರಿಸ್ಟ್‌ ಇವರಲ್ಲಿ ಪ್ರಮುಖರು. ಈ ಸಾಲಿಗೆ ಈಗ ಸ್ಟೀವನ್‌ ಸ್ಮಿತ್‌ ಕೂಡ ಸೇರಿದ್ದಾರೆ.

Advertisement

4 ತಿಂಗಳ ಹಿಂದೆ ಟೆಸ್ಟ್‌ ಸರಣಿಗೆಂದು ಭಾರತಕ್ಕೆ ಆಗಮಿಸಿದ ಸ್ಟೀವನ್‌ ಸ್ಮಿತ್‌ ಐಪಿಎಲ್‌ ಫೈನಲ್‌ ತನಕವೂ ಇಲ್ಲಿ ಉಳಿಯಬೇಕಾಯಿತು.  ಈ ಸಂದರ್ಭ ಇನ್‌ಸ್ಟಾಗ್ರಾಮ್‌ ಮೂಲಕ ಸಂದೇಶ ನೀಡಿರುವ ಅವರು, ಸ್ಮರಣೀಯ ಅನುಭವ ದೊಂದಿಗೆ ತವರಿಗೆ ಮರಳುತ್ತಿದ್ದೇನೆ ಎಂದಿದ್ದಾರೆ. 

“ಈ 4 ತಿಂಗಳ ಭಾರತದ ವಾಸ್ತವ್ಯ ಎನ್ನುವುದು ನನ್ನ ಪಾಲಿಗೆ ಅತ್ಯಂತ ರೋಚಕವಾಗಿತ್ತು. ಸಾಕಷ್ಟು ಏರಿಳಿತ ಗಳನ್ನು ಕಂಡರೂ ಇದನ್ನೆಲ್ಲ ನಿಭಾಯಿ ಸುವ ರೀತಿಯನ್ನು ಕಲಿತುಕೊಂಡೆ. ಟೆಸ್ಟ್‌ ಸರಣಿ  ಅತ್ಯಂತ ಕಠಿನವಾಗಿತ್ತು, ಆದರೆ ಇದನ್ನು ಆನಂದಿಸಿದೆ. ಕೆಲವು ಅದ್ಭುತ ವ್ಯಕ್ತಿಗಳನ್ನು ಭೇಟಿಯಾದೆ, ಹೊಸ  ಗೆಳೆಯರು ದೊರೆತರು. ಪುಣೆ ಜತೆಗಿನ ಐಪಿಎಲ್‌ ಅನುಭವವೂ ರೋಮಾಂಚಕಾರಿ ಯಾಗಿತ್ತು’ ಎಂದು ಸ್ಮಿತ್‌ ಸಂದೇಶವೊಂದನ್ನು ರವಾನಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next