ಮುಂಬಯಿ: ಏಷ್ಯನ್ ಈಕ್ವಿಟಿಗಳ ಋಣಾತ್ಮಕ ವಹಿವಾಟು ಹಾಗೂ ಕೋವಿಡ್ 19 ಸೋಂಕು ಪ್ರಕರಣದ ಹೆಚ್ಚಳದ ಪರಿಣಾಮ ಮುಂಬಯಿ ಷೇರುಪೇಟೆಯ ಮೇಲೆ ಬೀರಿದ್ದು, ಸೋಮವಾರ(ಮೇ 03) 400 ಅಂಕ ಕುಸಿತ ಕಂಡಿದೆ.
ಇದನ್ನೂ ಓದಿ:ಶಿವಮೊಗ್ಗದ ಅಭಿಮಾನಿಯ ಚಿತ್ರಕಲೆಯನ್ನು ಶ್ಲಾಘಿಸಿದ ಎಬಿ ಡಿವಿಲಿಯರ್ಸ್
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 403.45 ಅಂಕಗಳಷ್ಟು ಕುಸಿತ ಕಂಡಿದ್ದು, 48,378.91 ಅಂಕಗಳ ವಹಿಟಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 97.05 ಅಂಕ ಕುಸಿತವಾಗಿದ್ದು, 14,534.05ರ ಗಡಿಗೆ ತಲುಪಿದೆ.
ಸಂವೇದಿ ಸೂಚ್ಯಂಕ ನಷ್ಟದಿಂದಾಗಿ ಟೈಟಾನ್, ಎಸ್ ಬಿಐ, ಆರ್ ಐಎಲ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಒಎನ್ ಜಿಸಿ, ಎಚ್ ಡಿಎಫ್ ಸಿ ಬ್ಯಾಂಕ್, ಬಜಾಜ್ ಫಿನ್ ಸರ್ವ್, ಭಾರ್ತಿ ಏರ್ ಟೆಲ್, ಆಲ್ಟ್ರಾಟೆಕ್, ಕೋಟಕ್ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ.
ಮತ್ತೊಂದೆಡೆ ಮಾರುತಿ, ಬಜಾಜ್ ಆಟೋ, ಎಚ್ ಯುಎಲ್, ನೆಸ್ಲೆ, ಪವರ್ ಗ್ರಿಡ್, ಇಂಡಸ್ ಇಂಡ್ ಬ್ಯಾಂಕ್, ಮಹೀಂದ್ರ ಆ್ಯಂಡ್ ಮಹೀಂದ್ರ, ಏಷ್ಯನ್ ಪೇಂಟ್, ಡಾ.ರೆಡ್ಡೀಸ್ ಷೇರುಗಳು ಲಾಭಗಳಿಸಿವೆ.