Advertisement

‘ನೋಡಿ ಸ್ವಾಮಿ ಇವರ ಬರ್ತ್ ಡೇ ಇವತ್ತು’

01:35 PM Jun 21, 2021 | Team Udayavani |

‘ಆಪರೇಷನ್ ಅಲಮೇಲಮ್ಮ’ ಸಿನಿಮಾ ಖ್ಯಾತಿಯ ನಟ ರಿಷಿ ಅವರಿಗೆ ಇಂದು (ಜೂನ್ 21) ಹುಟ್ಟು ಹಬ್ಬದ ಸಂಭ್ರಮ. 33ನೇ ವಸಂತಕ್ಕೆ ಕಾಲಿಟ್ಟಿರುವ ಈ ನಟನಿಗೆ ಸ್ನೇಹಿತರಿಂದ, ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯಾಗುತ್ತಿದೆ.

Advertisement

ರಿಷಿ ಬರ್ತ್ ಡೇ ನಿಮಿತ್ತ ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಚಿತ್ರದ ಮೊದಲ ಲುಕ್ ಬಿಡುಗಡೆ ಮಾಡಲಾಗಿದೆ.  ಈ ಚಿತ್ರವನ್ನು ಇಲ್ಸಾವುದಿನ್ ಎನ್.ಎಸ್ ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ. ಆಪರೇಷನ್ ಅಲಮೇಲಮ್ಮ ಸಿನಿಮಾ ನಿರ್ಮಿಸಿದ್ದ ಅಮರೇಜ್ ಸೂರ್ಯವಂಶಿ ಎಂಬುವರ ನಿರ್ಮಾಣ ಮಾಡುತ್ತಿದ್ದಾರೆ.

ಇನ್ನು ಕನ್ನಡ ಚಿತ್ರರಂಗದಲ್ಲಿ ಪ್ರತಿಭಾನ್ವಿತ ನಟ ಎಂದೇ ಗುರುತಿಸಿಕೊಂಡಿರುವ ರಿಷಿ, ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಮಿಂಚಿದವರು. ಆರಂಭದಲ್ಲಿ 2013ರಂದು ‘ಮನಿ ಹನಿ ಶನಿ’ ಎಂಬ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ನಂತರ ಟಿ.ಎನ್. ಸೀತಾರಾಮ್ ನಿರ್ದೇಶನದ ‘ಮಹಾಪರ್ವ’ ಧಾರಾವಾಹಿಯಲ್ಲಿ ನಟಿಸಿ ಕಿರುತೆರೆಗೆ ಪಾದಾರ್ಪಣೆ ಮಾಡಿದರು.

ರಿಷಿ 2017ರಂದು ‘ಆಪರೇಷನ್ ಅಲಮೇಲಮ್ಮ’ ಚಿತ್ರದಲ್ಲಿ ಮೊದಲ ಬಾರಿ ನಾಯಕನಾಗಿ ನಟಿಸಿದರು. ಮೊದಲ ಸಿನಿಮಾದಲ್ಲೇ ರಿಷಿ ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿತು. ನಂತರ ಹೇಮಂತ್ ರಾವ್ ಅವರ ಕವಲುದಾರಿ ಸಿನಿಮಾ ಮತ್ತೊಂದು ಬಿಗ್ ಯಶಸ್ಸು ತಂದು ಕೊಟ್ಟಿತು. ಇವರು ಇತ್ತೀಚೆಗೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next