ನೆಲಮಂಗಲ: ಯಾರೂ ಮಹಮ್ಮದೀಯರು ಕೆತ್ತನೆ ಮಾಡಿದ ವಿಗ್ರಹ ಬಳಸಬಾರದು ಎಂದು ಕಾಳಿ ಮಠದ ಋಷಿ ಕುಮಾರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರ ಮುಸ್ಲಿಮರು ಕೆತ್ತಿದ ವಿಗ್ರಹಗಳನ್ನೂ ಹಿಂದೂಗಳು ಪೂಜೆ ಮಾಡುತ್ತಾರಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ನಮಗೆ ತಿಳಿಯದ ವಿಷಯವನ್ನು ಮಾಜಿ ಸಿಎಂ ತಿಳಿಸಿಕೊಟ್ಟಿದ್ದಾರೆ . ಶಿವಾರಪಟ್ಟಣದಲ್ಲಿ ವಿಗ್ರಹ ಕೆತ್ತನೆ ಬಗ್ಗೆ ಮಾಹಿತಿ ನೀಡಿದ್ದು ಸ್ವಾಗತಾರ್ಹ. ಇಂತಹ ಮಾಹಿತಿ ನಮಗೆ ಅವಶ್ಯಕತೆ ಇದೆ.ನಮ್ಮ ದೇವಾಲಯದ ಮುಂದೆ ಕುಂಕುಮ ಹಚ್ಚಿಕೊಳ್ಳದವರು ಮಾರಾಟ ಮಾಡುತ್ತಾರೆ. ಮಾರಾಟ ಮಾಡುವುದೇ ಬೇರೆ, ಪೂಜಾ ವಿಧಾನವೇ ಬೇರೆ ಎಂದರು.
ಮುಸ್ಲಿಮರಿಗೆ ವಿಗ್ರಹ ಆರಾಧನೆಯ ಕ್ರಮವಿಲ್ಲ. ಹಿಂದೂ ಸಂಸ್ಕೃತಿಯಲ್ಲಿ ಆಗಮ ಪರಂಪರೆ ಇದೆ. ಮೂರ್ತಿ ಕೆತ್ತುವ ವರ್ಗವೇ ಇದೆ. ಮಹಮ್ಮದೀಯರು ವಿಗ್ರಹ ಕೆತ್ತನೆ ಮಾಡಿರುವುದು ನಿಜವೇ ? ಎಂದು ಪ್ರಶ್ನಿಸಿದರು.
ಮಹಮ್ಮದೀಯರಿಂದ ವಿಗ್ರಹ ಖರೀದಿ ಮಾಡಿದ್ದರೆ ಎಚ್ಚರ, ಮಹಮ್ಮದೀಯರು ಕೆತ್ತನೆ ಮಾಡಿದ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದರೆ ಎಚ್ಚರ. ಊರಿಗೆ ಕೇಡು ಸಂಭವಿಸುತ್ತದೆ.ಯಾರೂ ಮಹಮ್ಮದೀಯರು ಕೆತ್ತನೆ ಮಾಡಿದ ವಿಗ್ರಹ ಬಳಸಬಾರದು. ಒಂದು ವೇಳೆ ಬಳಸಿದರೂ ಋತ್ವಿಕರ ಕೈಯಲ್ಲಿ ಮತ್ತೆ ಪರಿಶೀಲಿಸಿ. ಪುರೋಹಿತ ವರ್ಗ ಕರೆಸಿ, ಅವರು ಅದಕ್ಕೆ ಬೇಕಾದ ಮಾರ್ಪಾಡುಗಳನ್ನು ಮಾಡಿಸಲು ಹೇಳುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
ಬೆಂಗಳೂರು ಕರಗ ನಡೆಯುವ ಧರ್ಮರಾಜ ಸ್ವಾಮಿ ದೇವಸ್ಥಾನ , ಭೀಮಲಿಂಗೇಶ್ವರ ದೇವಸ್ಥಾನಕ್ಕೆ ದ್ರೌಪದಿ ಆಗಮಿಸುವ ಕ್ರಮ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅಲ್ಲಿ ಈಗ ದರ್ಗಾ ಇದೆ. ಇದನ್ನು ಟಿಪ್ಪು ಸುಲ್ತಾನ್ ಒಡೆದಿದ್ದಾನೆ.ಅವನ ಸೈನಿಕನೊಬ್ಬನನ್ನು ಹೂತ ಬಳಿಕ ಅದನ್ನು ದರ್ಗಾ ಮಾಡಲಾಗಿದೆ. ಆ ದರ್ಗಾ ಉತ್ಖನನ ನಡೆಸಬೇಕು. ಇದಕ್ಕೆ ಬೇಕಾದ ದಾಖಲೆಗಳನ್ನು ಹುಡುಕಲಾಗುತ್ತಿದೆ. ಅದನ್ನೂ ಒದಗಿಸುತ್ತೇವೆ ಎಂದರು.