Advertisement

ಊರುಗೋಲಿನೊಂದಿಗೆ ನಡೆಯುತ್ತಿರುವ ಫೋಟೋ ಹಂಚಿಕೊಂಡ ರಿಷಭ್ ಪಂತ್

08:32 PM Feb 10, 2023 | Team Udayavani |

ನವದೆಹಲಿ: ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಭೀಕರ ಕಾರು ಅವಘಡಕ್ಕೆ ಸಿಲುಕಿ ಪಾರಾಗಿದ್ದಕ್ರಿಕೆಟಿಗ ರಿಷಭ್ ಪಂತ್ ಅವರು ಟ್ವಿಟರ್ ನಲ್ಲಿ ಶುಕ್ರವಾರ, ಫೆ. 10 ರಂದು ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಅಲ್ಲಿ ಅವರು ಊರುಗೋಲಿನ ಸಹಾಯದಲ್ಲಿ ನಡೆಯುವುದನ್ನು ಕಾಣಬಹುದಾಗಿದೆ.

Advertisement

ಪಂತ್ ಪ್ರಸ್ತುತ ಚೇತರಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದು, ಸ್ವಲ್ಪ ಸಮಯದವರೆಗೆ ಆಟದಿಂದ ಹೊರಗುಳಿಯಲಿದ್ದಾರೆ. . ಪಂತ್ 2023 ರಲ್ಲಿ ಕ್ರಿಕೆಟ್ ಆಡುವುದಿಲ್ಲ, ಆದರೆ ಪುನರಾಗಮನ ಮಾಡಲು ನಿರ್ಧರಿಸಿದ್ದಾರೆ.

ಪಂತ್ ಚಿತ್ರಗಳಿಗೆ ಶೀರ್ಷಿಕೆ ನೀಡಿ, “ಒಂದು ಹೆಜ್ಜೆ ಮುಂದೆ, ಒಂದು ಹೆಜ್ಜೆ ಬಲಶಾಲಿ, ಒಂದು ಹೆಜ್ಜೆ ಉತ್ತಮ” ಎಂದು ಬರೆದಿದ್ದಾರೆ.

ನಾಗ್ಪುರದಲ್ಲಿ ಫೆಬ್ರವರಿ 10, ಗುರುವಾರ ಆರಂಭವಾದ ಆಸ್ಟ್ರೇಲಿಯ ವಿರುದ್ಧದ ಆರಂಭಿಕ ಟೆಸ್ಟ್‌ನಲ್ಲಿ ಪಂತ್ ಅವರ ಅನುಪಸ್ಥಿತಿಯು ಕೆ.ಎಸ್. ಭರತ್‌ಗೆ ಆಡುವ ಅವಕಾಶ ದೊರಕಿದೆ.

ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ಗೆ 25 ವರ್ಷದ ಪಂತ್ ಫಿಟ್ ಆಗಬಹುದೇ ಎಂದು ಕಾದು ನೋಡಬೇಕಾಗಿದೆ. ಅವರು 6 ಶತಕಗಳು ಮತ್ತು 11 ಅರ್ಧಶತಕಗಳೊಂದಿಗೆ ಭಾರತದ ಅತ್ಯಂತ ಯಶಸ್ವಿ ವಿಕೆಟ್‌ಕೀಪರ್-ಬ್ಯಾ ಟ್ಸ್ ಮ್ಯಾನ್ ಗಳಲ್ಲಿ ಒಬ್ಬರಾಗಿದ್ದಾರೆ.

Advertisement

2023 ರ ಐಪಿಎಲ್ ನಲ್ಲಿ ಪಂತ್ ಅವರು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಮುನ್ನಡೆಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅವರು ಚೇತರಿಸಿಕೊಳ್ಳಲು ಸಾಧ್ಯವಾಗುವ ಸಾಧ್ಯತೆಯಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next