Advertisement
ಹೌದು, ಈ ಹಿಂದೆ ಜಿಲ್ಲೆಯಲ್ಲಿ ಆರು ತಾಲೂಕು ಅಸ್ತಿತ್ವದಲ್ಲಿದ್ದಾಗಲೇ ಜಿಲ್ಲೆಯಲ್ಲಿ 36 ಜಿಪಂ ಕ್ಷೇತ್ರಗಳಿದ್ದವು. ಗುಳೇದಗುಡ್ಡ,ಇಳಕಲ್ಲ ಹಾಗೂ ರಬಕವಿ-ಬನಹಟ್ಟಿ ಸಹಿತ 9 ಹೊಸ ತಾಲೂಕು ರಚನೆಯಾದಾಗ, ಕಳೆದ 2021ರಲ್ಲಿ ಅಂದಿನ ಬಿಜೆಪಿ ಸರ್ಕಾರ,
ತಾಲೂಕು ಪಂಚಾಯಿತಿ ಸಂಖ್ಯೆ ಇಳಿಸಿ, ಜಿಪಂ ಸಂಖ್ಯೆಗಳನ್ನು 40ಕ್ಕೆ ಏರಿಸಿತ್ತು. ಆಗ ತಾಲೂಕು ಪಂಚಾಯಿತಿ ವ್ಯವಸ್ಥೆಯನ್ನೇ
ರದ್ದುಗೊಳಿಸುತ್ತಾರೆ ಎಂಬ ದೊಡ್ಡ ಚರ್ಚೆಯೂ ನಡೆದಿತ್ತು. ಕೊನೆಗೆ 2021ರ ಮಾರ್ಚ್ 29ರಂದು ಅಧಿಸೂಚನೆ ಹೊರಡಿಸಿ, 130 ಇದ್ದ ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು 110ಕ್ಕೆ ಇಳಿಸಿದರೆ, 36ಇದ್ದ ಜಿ.ಪಂ. ಕ್ಷೇತ್ರಗಳನ್ನು 46ಕ್ಕೆ ಏರಿಸಿ, ಹೊಸ ಕ್ಷೇತ್ರಗಳನ್ನು ವಿಂಗಡಣೆ ಮಾಡಲಾಗಿತ್ತು.
ರದ್ದುಪಡಿಸಿ, ಈ ಹಿಂದೆ 2016ರಲ್ಲಿ ಇದ್ದ ಕ್ಷೇತ್ರಗಳನ್ನೇ ಬಹುತೇಕ ಉಳಿಸಿಕೊಳ್ಳಲಾಗಿದೆ. ಜಿಪಂ ಕ್ಷೇತ್ರಗಳಲ್ಲಿ ಒಂದನ್ನು ಕಡಿತ ಮಾಡಿದ್ದು, 35 ನಿಗದಿಯಾಗಿವೆ. ತಾಪಂ ಕ್ಷೇತ್ರಗಳಲ್ಲಿ 130 ಇದ್ದಿದ್ದು 134ಕ್ಕೆ ಏರಿಸಲಾಗಿದೆ. ಆದರೆ, 2021ರ ಅಧಿಸೂಚನೆಗೆ ಹೋಲಿಕೆ ಮಾಡಿದರೆ, 40 ಇದ್ದ ಜಿ.ಪಂ.ಗಳು 35 ಹಾಗೂ 110 ಇದ್ದ ತಾ.ಪಂ.ಗಳು 134ಕ್ಕೆ ಏರಿಸಲಾಗಿದೆ. ಹಲವರಿಗೆ ನಿರಾಶೆ: ಹೊಸ ತಾಪಂ ಹಾಗೂ ಜಿಪಂ ಕ್ಷೇತ್ರ ಪುನರ್‌ವಿಂಗಡಣೆ ಮೂಲಕ, ತಮ್ಮೂರು ಜಿಪಂ, ತಾಪಂ ಕೇಂದ್ರ
ಸ್ಥಾನಗಳಾಗಿದ್ದು, ರಾಜಕೀಯ ಭವಿಷ್ಯ ಕಂಡುಕೊಳ್ಳಬೇಕೆಂಬ ಆಶಯ ಹೊತ್ತಿದ್ದವರಿಗೆ ಸಧ್ಯ ನಿರಾಶೆಯಾಗಿದೆ. ಅಲ್ಲದೇ ಕೆಲ
ಜಿ.ಪಂ. ಕ್ಷೇತ್ರಗಳನ್ನು, ಎರಡು ವಿಧಾನಸಭೆ ಮತಕ್ಷೇತ್ರಗಳ ವ್ಯಾಪ್ತಿಯ ಹಳ್ಳಿಗಳನ್ನು ವಿಂಗಡಿಸಿದ್ದು, ಯಾವುದೇ ರಾಜಕೀಯ ಪಕ್ಷದ ಟಿಕೆಟ್ ಹಂಚಿಕೆಯಿಂದ ಹಿಡಿದು ಅನುದಾನ ಬಳಸಿಕೊಳ್ಳಲೂ ಅಡೆತಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
Related Articles
Advertisement
ಜಿಲ್ಲೆಯಲ್ಲಿ ಜಿಪಂ ಮತ್ತು ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ಲೋಪಗಳಾಗಿವೆ. ಸರ್ಕಾರ ತನ್ನದೇ ನಿಯಮ ಮೀರಿನಡೆದುಕೊಂಡಿದೆ. ಭೌಗೋಳಿಕ ಕ್ಷೇತ್ರ ಹಾಗೂ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರಗಳ ಪುನರ್‌ವಿಂಗಡಣೆ ಆಗಬೇಕು. ಆದರೆ, ಕಾಂಗ್ರೆಸ್ ಸರ್ಕಾರ, ತನಗೆ ಅನುಕೂಲಕ್ಕೆ ತಕ್ಕಂತೆ ವಿಂಗಡೆ ಮಾಡಿದೆ. ಈ ಕುರಿತು ಚುನಾವಣೆ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಿದ್ದೇವೆ.
ಹೂವಪ್ಪ ರಾಠೊಡ, ಜಿ.ಪಂ. ಮಾಜಿ ಅಧ್ಯಕ್ಷ *ಶ್ರೀಶೈಲ ಕೆ. ಬಿರಾದಾರ