Advertisement

ಭಾರತೀಯ ಸಂಸ್ಕೃತಿಗಿದೆ ಅಗಾಧ ಶಕಿ

01:19 PM Oct 21, 2019 | Naveen |

ರಿಪ್ಪನ್‌ಪೇಟೆ: ಭಾರತೀಯ ಸಂಸ್ಕೃತಿಯಲ್ಲಿ ವಿದ್ಯೆ ಬಹು ಮುಖ್ಯ. ಕಲೆ, ಸಾಹಿತ್ಯ, ಶಿಲ್ಪ, ವಾಣಿಜ್ಯ, ವಾಸ್ತು ಹೀಗೆ ಹಲವಾರು ಅಯಾಮಗಳ ಬಗ್ಗೆ ನಮ್ಮ ಋಷಿ ಮುನಿಗಳು ತಪ ಸಾಧನೆಯಿಂದ ಆದ ಅನುಭವವನ್ನು ಶಾಸ್ತ್ರಗಳಲ್ಲಿ ಸಂಗ್ರಹಿಸುವ ಅಗಾಧ ಜ್ಞಾನ ಶಕ್ತಿ ನಿ ಧಿಯ ಅಧ್ಯಯನವೇ ಈ ಸಮ್ಮೇಳನದ ಉದ್ದೇಶವಾಗಿದೆ ಎಂದು ಹೊಂಬುಜ ಜೈನ ಮಠಾಧ್ಯಕ್ಷ ಜಗದ್ಗುರು ಡಾ| ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಹೇಳಿದರು.

Advertisement

ಸಮೀಪದ ಹೊಂಬುಜ ಜೈನ ಮಠದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ 33 ನೇ ವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಇತಿಹಾಸಕಾರರಿಗೆ ಶಾಸನ ಲಿಪಿ ಮತ್ತು ಪಠ್ಯ ವಿಶ್ಲೇಷಣೆ ಅಭಿರುಚಿ ಅಗತ್ಯ. ಕನ್ನಡದ ಹಲ್ಮಿಡಿ ಶಾಸನ, ತಮಟಗಲ್ಲು ಶಾಸನಗಳ ವಿಮರ್ಶೆ,ಗಂಗರ ಶಿಲ್ಪಕಲೆ ಹೀಗೆ ಹಲವು ವಿಷಯಗಳ ಕುರಿತು ಸಂಶೋಧನೆ ನಡೆಸಿ ಇಂದಿನ ಕಾಲದ ಜನತೆಗೆ ಸರಳವಾಗಿ ಪರಿಚಯಿಸುವ ಕಾರ್ಯದಲ್ಲಿ ತೊಡಗಲು ಇದು ಸಹಕಾರಿಯಾಗಿದೆ ಎಂದರು.

ಕರ್ನಾಟಕ ಇತಿಹಾಸ ಅಕಾಡಮಿ ಅಧ್ಯಕ್ಷ ಡಾ| ದೇವರಕೊಂಡಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಂಗಳೂರು ಮಿಥಿಕ್‌ ಸೊಸೈಟಿ ಉಪಾಧ್ಯಕ್ಷ ಡಾ| ಎಂ.ಕೊಟ್ರೇಶ್‌ ಭಾಗವಹಿಸಿ ಸಮಾರೋಪ ಭಾಷಣ ಮಾಡಿದರು.

ಇದೇ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಮತ್ತು ಹಿರಿಯ ವಿದ್ವಾಂಸ ಡಾ| ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರಿಗೆ “ಭಾಷಾ ವಿಭೂಷಣ’ ಮತ್ತು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ|ದೇವರಕೊಂಡಾರೆಡ್ಡಿ ಅವರಿಗೆ “ಶಾಸನ ವಾಚಸ್ಪತಿ’ ಎಂಬ ಬಿರುದು ನೀಡಿ ಶ್ರೀಗಳು ಗೌರವಿಸಿದರು.

Advertisement

ಪಿಎಚ್‌ಡಿ ಮತ್ತು ಲಿಟ್‌ ಪದವಿ ಪಡೆದ ಡಾ| ನಿಂಗಪ್ಪ ವೀರಭದ್ರಪ್ಪ, ಡಾ| ಗೀತಾ, ಡಾ| ವೀಣಾ ಎಂ. ಕಲ್ಮಠ, ಡಾ| ನವೀನ್‌
ಕುಮಾರ್‌ ಪಿ., ಡಾ| ಕಾಂತೇಶ್‌ ರೆಡ್ಡಿ, ಆರ್‌. ಗೋಡಿಹಾಳ, ಡಾ| ರೇವಣಸಿದ್ದಯ್ಯ ಕೆ., ಡಾ| ಲೋಕಣ್ಣ ಭಜಂತ್ರಿ, ಡಾ| ಶಶಿಕುಮಾರ ಎಸ್‌., ಡಾ| ರವಿಕುಮಾರ ಕೆ. ನವಲಗುಂದ, ಡಾ| ಅಖ್ಹೇರ್‌ ಖಾನ ಎಚ್‌.ಎಸ್‌., ಡಾ| ಕುಮಾರಸ್ವಾಮಿ ಎಸ್‌.ಡಿ., ಡಾ| ಜ್ಯೋತಿ ಶಂಕರ್‌, ಡಾ| ಅನಿಲ್‌ ಎಲ್‌., ಡಾ| ಮಮತಾರಾಣಿ, ಡಾ| ಸದಾಶಿವ ಎಸ್‌. ಮುಗಳಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಮ್ಮೇಳನದ ಸರ್ವಾಧ್ಯಕ್ಷ ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಮತ್ತು ಹಿರಿಯ ವಿದ್ವಾಂಸ ಡಾ| ಟಿ.ವಿ.ವೆಂಕಟಾಚಲ ಶಾಸ್ತ್ರಿ ಸಮ್ಮೇಳನದ
ಯಶಸ್ಸುಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಭಾರತಿ ಪ್ರಾರ್ಥಿಸಿದರು. ಕೆ.ಎಸ್‌. ರಾಜಶೇಖರ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next