Advertisement
ಅತಿಶಯ ಮಹಾಕ್ಷೇತ್ರ ಹೊಂಬುಜ ಜೈನ ಮಠದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕರ್ನಾಟಕ ಇತಿಹಾಸ ಅಕಾಡೆಮಿಯ 33 ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ವಿವಿಧ ಸ್ಥಳಗಳ ಕೋಟೆ-ಕೊತ್ತಲು, ಅರಮನೆ, ಪಾಳು ಬಿದ್ದ ಶಾಸನಗಳ ಅಧ್ಯಯನ ಅಕಾಡೆಮಿಯಿಂದ ನಡೆಯುತ್ತಿದೆ. ಅಕಾಡೆಮಿಯ ಸದಸ್ಯರು ಸಹ ಸದಾ ಅಧ್ಯಯನ ನಿರತರಾಗಿ ಹೊಸ ಸಂಶೋಧನೆ ನಡೆಸಿ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ ಎಂದರು.
Related Articles
Advertisement
ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ದೇವರಕೊಂಡಾರೆಡ್ಡಿ ಆಶಯ ಭಾಷಣ ನೆರವೇರಿಸಿ ಮಾತನಾಡಿ, ರಾಜ್ಯದ ವಿವಿಧೆಡೆ ಇಂತಹ ಸಮ್ಮೇಳನ ನಡೆಸಿ ಜನಸಾಮಾನ್ಯರು ಸಹ ಇತಿಹಾಸ ಸಂಶೋಧನೆಗೆ ಆಸಕ್ತಿ ಹೊಂದುವಂತೆ ಮಾಡಲಾಗುತ್ತಿದೆ ಎಂದರು.
ಹೊಂಬುಜ ಜೈನಮಠದ ಡಾ| ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಕರ್ನಾಟಕದ ಇತಿಹಾಸ, ಸಾಹಿತ್ಯ, ಕಲೆ, ಸಂಸ್ಕೃತಿಗಳಿಗೆ ಜೈನ ರಾಜರು ಮತ್ತು ಕವಿಗಳ ಕೊಡುಗೆ ಸ್ಮರಣೀಯ. ಅಹಿಂಸೆಯ ಸಂದೇಶದ ಮೂಲಕ ಜನರಲ್ಲಿ ಉತ್ತಮ ಜೀವನ ವಿಧಾನ ಪ್ರೇರೇಪಿಸುವುದು ಅತಿಮುಖ್ಯವಾಗಿದೆ ಎಂದರು. ಇತಿಹಾಸಕಾರರು, ಅಧ್ಯಯನ ನಿರತರು ಹಾಗೂ ಶಾಸನಗಳ ಬಗ್ಗೆ ಆಸಕ್ತಿ ಇರುವವರಿಗೆ ಶ್ರೀಮಠ ಸದಾ ಸಹಕಾರ ನೀಡುತ್ತಾ ಬಂದಿದೆ ಎಂದರು.
ಮಂಗಳೂರಿನಲ್ಲಿ ನಡೆದ ಅಂಚೆ ಇಲಾಖೆಯ ಸಮ್ಮೇಳನದಲ್ಲಿ ಹೊಂಬುಜದ ರಾಜ ಜಿನದತ್ತನ ಭಾವಚಿತ್ರದ ಅಂಚೆ ಚೀಟಿ ಬಿಡುಗಡೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಹೊಂಬುಜದ ಅಂಚೆ ನೌಕರರು ಈ ವಿಶಿಷ್ಟ ಅಂಚೆ ಚೀಟಿಯನ್ನು ಶ್ರೀಮಠದ ಸ್ವಾಮಿಗಳಿಗೆ ಹಸ್ತಾಂತರಸಿದರು.
ಇದೇ ಸಂದರ್ಭದಲ್ಲಿ ಡಾ| ವಸುಂಧರಾ μಲಿಯೋಜಾ ಅವರಿಗೆ ಇತಿಹಾಸ ಸಂಸ್ಕೃತಿ ಶ್ರೀ, ಡಾ.ಜೆ. .ನಾಗಯ್ಯರಿಗೆ -ಡಾ| ಬಾ.ರಾ.ಗೋಪಾಲ ಶಾಸನ ಪ್ರಶಸ್ತಿ, ಡಾ| ಶೀಲಾಕಾಂತ ಪತ್ತಾರರಿಗೆ -ಸಂಶೋಧನಾ ಶ್ರೀ, ಡಾ| ವಿರೂಪಾಕ್ಷಿ ಪೂಜಾರಹಳ್ಳಿ ಅವರಿಗೆ -ನಾಯಕಶ್ರೀ, ಡಾ| ಡಿ.ವಿ. ಪರಮಶಿವಮೂರ್ತಿ ಅವರಿಗೆ-ನೊಳಂಬಶ್ರೀ, ಡಾ| ಕೆ.ವಸಂತಲಕ್ಷ್ಮೀ ಅವರಿಗೆ -ಡಾ| ಶ್ರೀನಿವಾಸ ಹಾವನೂರ ಸ್ಮರಣಾರ್ಥ, ಡಾ|ಬಿ.ಜಿ.ಸಿದ್ದಲಿಂಗಮ್ಮ ಅವರಿಗೆ -ಸುಮಲತಾ ಪಾಟೀಲ್ ಪ್ರಶಸ್ತಿ, ಎಂ.ಬಿ.ಪಾಟೀಲ್‌ರಿಗೆ- ಸೂರ್ಯಕೀರ್ತಿ, ಡಾ|ಆರ್.ಮೋಹನರಿಗೆ -ಡಾ| ಎಂ.ಎಚ್. ಕೃಷ್ಣ ಮೆರಿಟ್ ಅವಾರ್ಡ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ ಡಾ| ಟಿ.ವಿ. ವೆಂಕಟಾಚಲ ಶಾಸ್ತ್ರಿ ಮಾತನಾಡಿ, ಯುವಕರು ಇತಿಹಾಸ ಸಂಶೋಧನೆಯತ್ತಚಿತ್ತ ಹರಿಸಬೇಕಾಗಿದೆ. ಇತಿಹಾಸ ಅಕಾಡಮಿ ಜ್ಞಾನಾರ್ಜನೆಯ ಭಂಡಾರವಾಗಿದೆ. ಹೊಂಬುಜ ಜೈನ ಮಠವು ಅಳಿದುಳಿದ ಹಲವು ಶಾಸನಗಳನ್ನು ಪುನರುತ್ಥಾನಗೊಳಿಸುವ ಕೆಲಸ ಮಾಡುವುದರೊಂದಿಗೆ ಸಂಶೋಧನಾ ವಿದ್ಯಾರ್ಥಿಗಳಿಗೆ ಸುಲಭ ಮಾಡಿದೆ ಎಂದರು. ಅಕಾಡೆಮಿ ಸದಸ್ಯರು ಬರೆದ ವಿವಿಧ ಪುಸ್ತಕಗಳನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಶಾರದಾ ಮತ್ತು ಅಂಜನಾ ಪ್ರಾರ್ಥಿಸಿದರು. ಜಿ.ಎಂ.ಮಂಜಪ್ಪ ಸ್ವಾಗತಿಸಿದರು. ಡಾ| ವಿ.ಸಂಧ್ಯಾ ನಿರೂಪಿಸಿದರು. ಪ್ರೊ| ಜಿ.ಕೆ.ದೇವರಾಜ ಸ್ವಾಮಿ ವಂದಿಸಿದರು.